ಪೆರ್ಲ :ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ಮಹಾಸಭೆ ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸಭಾಂಗಣದಲ್ಲಿ ಜರುಗಿತು. ಘಟಕ ಅಧ್ಯಕ್ಷ ಶಿವಪ್ಪ ಮಾಸ್ಟರ್ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರಾದ ಸುನಿತ್‍ಕುಮಾರ್ ಮಾಸ್ಟರ್, ಚನಿಯಪ್ಪ ಪೂಜಾರಿ ಅಲಾರ್, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಪೂಜಾರಿ, ಸದಾನಂದ ಪೂಜಾರಿ ಬೈರಡ್ಕ, ಸಂಕಪ್ಪ ಪೂಜಾರಿ ಬಾಡೂರು, ಬಿ.ಪಿ ಶೇಣಿ, ಪದ್ಮನಾಭ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಸಂಘದ ವತಿಯಿಂದ ಗುರುಮಂದಿರ ನಿರ್ಮಾಣದ ಬಗ್ಗೆ ಚರ್ಚೆ, ಸಂಘಟನೆಗೆ ಹೊಸ ಸದಸ್ಯರ ಸೇರ್ಪಡೆ, ಸಂಘಟನೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಮಾಸಿಕ ಸಭೆಯನ್ನು ವಿವಿಧ ಪ್ರದೇಶಗಳಲ್ಲಿ ಸದಸ್ಯರ ಮನೆಗಳಲ್ಲಿ ಆಯೋಜಿಸುವುದು ಮುಂತಾದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಂಘಟನೆ 2022-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಚನಿಯಪ್ಪ ಪೂಜಾರಿ ಅಲಾರು, ಸುನಿತ್‍ಕುಮಾರ್ ಡಿ, ಶಿವಪ್ಪ ಮಾಸ್ಟರ್ ಎಣ್ಮಕಜೆ, ನೂತನ ಅಧ್ಯಕ್ಷರನ್ನಾಗಿ ಬಿ.ಪಿ ಶೇಣಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನರಸಿಂಹ ಪೂಜಾರಿ ವಾಣೀನಗರ, ರಾಮಣ್ಣ ಪೂಜಾರಿ ಬಾಂಕಾನ, ಪ್ರಧಾನ ಕಾರ್ಯದರ್ಶಿಯಾಗಿ ಅಖಿಲೇಶ್ ಕಾನ, ಜತೆ ಕಾರ್ಯದರ್ಶಿಗಳಾಗಿ ನಾರಾಯಣ ಪೂಜಾರಿ ಶೇಣಿ, ರಾಜಪ್ಪ ಕಾಟುಕುಕ್ಕೆ, ಸಂಘಟನಾ ಕಾರ್ಯದರ್ಶಿಯಾಗಿ ಸಂಕಪ್ಪ ಪೂಜಾರಿ ಬಾಡೂರು, ಕೋಶಾಧಿಕಾರಿಯಾಗಿ ಪದ್ಮನಾಭ ಸುವರ್ಣ, ಲೆಕ್ಕಪರಿಶೋಧಕರಾಗಿ ನಾರಾಯಣ ಪೂಜಾರಿ ಮಾಸ್ಟರ್ ಹಾಗೂ 15ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
0
ಅಕ್ಟೋಬರ್ 05, 2022