ಮುಳ್ಳೇರಿಯ: ಆಲಕ್ಕೋಡು ಪೆರಿಯ ಪರಂಪರ ವಿದ್ಯಾಪೀಠಂ, ಗೋಕುಲಂ ಗೋಶಾಲಾದ ನೇತೃತ್ವದಲ್ಲಿ ಅ.23ರಂದು ಆರಂಭವಾದ ದೀಪಾವಳಿ ಸಂಗೀತೋತ್ಸವಂ ಕಾರ್ಯಕ್ರಮ ಭಾನುವಾರ ಸಮಾರೋಪಗೊಂಡಿತು.
ಬೆಳಗ್ಗೆ 10ರಿಂದ ಉಚಿತ ವೈದ್ಯಕೀಯ ಶಿಬಿರ, ಅಪರಾಹ್ನ 3.15ರ ತನಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ಪರಂಪರಾ ಸಭೆÉಯಲ್ಲಿ ಪರಂಪರಾ ವಿದ್ಯಾಪೀಠದ ಆಡಳಿತ ನಿರ್ದೇಶಕ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ರಾಘವೇಶ್ವರ ಶ್ರೀಗಳಿಗೆ ಗುರುಭಿಕ್ಷಾ ಸೇವೆ :
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳನ್ನು ಶುಕ್ರವಾರ ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ಗೋಶಾಲೆಗೆ ಬರಮಾಡಿಕೊಳ್ಳಲಾಯಿತು. ಶನಿವಾರ ಬೆಳಗ್ಗೆ ಶ್ರೀ ಚಂದ್ರಮೌಳೀಶ್ವರ ಪೂಜೆ, ಪಾದುಕಾ ಪೂಜೆ, ಗೋಪೂಜೆ ನಡೆಯಿತು. ವಿಷ್ಣುಪ್ರಸಾದ್ ಹೆಬ್ಬಾರ ದಂಪತಿಗಳು ಗುರುಭಿಕ್ಷಾ ಸೇವೆ ನಡೆಸಿದರು. ಬೆಳಗ್ಗೆ ಪಾಲಕ್ಕಾಡ್ ಸ್ವಾಮಿನಾಥನ್ ಹಾಗೂ ವಿಶ್ವೇಶ್ ಸ್ವಾಮಿನಾಥನ್ ಅವರಿಂದ ವಯಲಿನ್ ಕಚೇರಿ ನಡೆಯಿತು. ನಂತರ ಕಾಂಚನ ಸಹೋದರಿಯರಿಂದ ಸಂಗೀತ ಕಚೇರಿ ಹಾಗೂ ಮಧ್ಯಾಹ್ನ ಪರಂಪರ ವಿದ್ಯಾಪೀಠಂ ಭಜನಾ ಸಂಘದವರಿಂದ ಭಜನೆ ನಡೆಯಿತು. ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಹಾರ್ಮೋನಿಯಂ ಹಾಗೂ ಮೃದಂಗದಲ್ಲಿ ಡಾ. ಕುಳಲ್ ಮಣ್ಣಂ ಜಿ.ರಾಮಕೃಷ್ಣನ್ ಜೊತೆಗೂಡಿದರು.
ಅ.23ರಿಂದ ಆರಂಭವಾದ ದೀಪಾವಳಿ ಸಂಗೀತೋತ್ಸವದಲ್ಲಿ ಪ್ರತಿದಿನ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಗೋಶಾಲೆಯಲ್ಲಿಯೇ ಜರಗುತ್ತಿರುವ ಸಂಗೀತೋತ್ಸವವನ್ನು ಗೋವುಗಳು ಆಸ್ವಾದಿಸುತ್ತಿರುವುದು ವಿಶೇಷವಾಗಿತ್ತು. ಪ್ರಸಿದ್ದ ರಂಗೋಲಿ ಚಿತ್ರ ಕಲಾವಿದ ಪುಟ್ಟಣ್ಣ ಬಾಯಾರು ರಚಿಸಿದ ಗೋಶಾಲೆ ಕೃಷ್ಣನ ರಂಗೋಲಿ ಆಕರ್ಷಕವಾಗಿ ಮೂಡಿಬಂದಿತ್ತು.