ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಮಂಗಲ್ಪಾಡಿ ನಯಾಬಜಾರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಆರೋಗ್ಯ ಕ್ಲಬ್ ನಲ್ಲಿ ಮಹಿಳಾ ತರಬೇತುದಾರರ ಹುದ್ದೆ ಖಾಲಿ ಇದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಸಕ್ತ ಅರ್ಜಿದಾರರು ದೈಹಿಕ ಶಿಕ್ಷಣದಲ್ಲಿ ಪದವಿ/ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಅಕ್ಟೋಬರ್ 22 ರೊಳಗೆ ಅರ್ಜಿ ಸಲ್ಲಿಸಿ ಬೇಕು. ಅಕ್ಟೋಬರ್ 26 ರಂದು ಬೆಳಿಗ್ಗೆ 10.30 ಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತಿನಲ್ಲಿ ಸಂದರ್ಶನ ನಡೆಯಲಿದೆ. ಮಾಹಿತಿಗೆ ದೂರವಾಣಿ 9946326341 ಸಂಪರ್ಕಿಸಬಹುದಾಗಿದೆ.
ಮಹಿಳಾ ತರಬೇತುದಾರರ ನೇಮಕಾತಿ
0
ಅಕ್ಟೋಬರ್ 13, 2022
Tags