ಪಾಲಕ್ಕಾಡ್: ಧಾರ್ಮಿಕ ಭಯೋತ್ಪಾದನೆ ಪ್ರಕರಣದಲ್ಲಿ ಎನ್.ಐ.ಎ.ಗೆ ಬೇಕಾಗಿರುವ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ಮನೆ ಮೇಲೆ ದಾಳಿ ನಡೆಸಿದೆ. ಪಾಲಕ್ಕಾಡ್ ನ ಪಟ್ಟಾಂಬಿಯ ಮನೆಯಲ್ಲಿ ರೌಫ್ ಬಂದಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಆದರೆ ರೌಫ್ ಪತ್ತೆಯಾಗಲಿಲ್ಲ.
ರೌಫ್ ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಎನ್ ಐಎಗೆ ಮಾಹಿತಿ ಸಿಕ್ಕಿತ್ತು.
ರೌಫ್ ಕೋಝಿಕ್ಕೋಡ್ ಮತ್ತು ಕಳಮಶ್ಶೇರಿ ತಲುಪಿರುವ ಬಗ್ಗೆ ಎನ್ ಐಎಗೆ ಮಾಹಿತಿ ಲಭಿಸಿತ್ತು. ನಿಷೇಧದ ನಡುವೆಯೂ ರವೂಫ್ ತಲೆಮರೆಸಿಕೊಂಡು ಸಂಘಟನೆಯನ್ನು ನಿಯಂತ್ರಿಸುತ್ತಿದ್ದ ಎಂಬ ಸುಳಿವೂ ಇದೆ. ಹಾಗಾಗಿ ರೌಫ್ ಅಡಗುತಾಣ ಕೇರಳದಲ್ಲಿಯೇ ಇದೆ ಎಂದು ಅಂದಾಜಿಸಲಾಗಿದೆ. ರೌಫ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ದೇಶವಿರೋಧಿ ಚಟುವಟಿಕೆಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವುದು ಮತ್ತು ಪಿತೂರಿಯಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‍ಐಎ ಪತ್ತೆ ಮಾಡಿದೆ. ರವೂಫ್ ಪ್ರಕರಣದಲ್ಲಿ 12ನೇ ಆರೋಪಿ.
ಪಿಎಫ್‍ಐ ದಾಳಿ ವೇಳೆ ರೌಫ್ ಅಬ್ದುಲ್ ಸತ್ತಾರ್ ಜೊತೆ ತಲೆಮರೆಸಿಕೊಂಡಿದ್ದ. ಅಬ್ದುಲ್ ಸತ್ತಾರ್ ಬಂಧನದ ಬಳಿಕವೂ ರವೂಫ್ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿದೆ.
ಅಬ್ದುಲ್ ಸತ್ತಾರ್ ನನ್ನು ನಿನ್ನೆ ಪೆÇಲೀಸ್ ಕಸ್ಟಡಿಗೆ ಬಿಡುಗಡೆ ಮಾಡಲಾಗಿತ್ತು. ಸತ್ತಾರ್ ನನ್ನು ತ್ರಿಶೂರ್ ಪಾವರಟ್ಟಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಪರಾರಿಯಾದ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿಯ ಮನೆ ಮೇಲೆ ಎನ್.ಐ.ಎ ದಾಳಿ; ನಿರ್ಣಾಯಕ ಮಾಹಿತಿ ಲಭ್ಯ ಎಂದು ಸೂಚನೆ
0
ಅಕ್ಟೋಬರ್ 21, 2022