ಮುಳ್ಳೇರಿಯ: ಮುಳಿಯಾರು ಪಂಚಾಯಿತಿ ವ್ಯಾಪ್ತಿಯ ಆಲೂರಿನ ಏಕೋಧ್ಯಾಪಕ ವಿದ್ಯಾಲಯ (ಎಂಜಿಎಲ್ ಸಿ)ಯನ್ನು ಮುಚ್ಚುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರದ ಭಾಗವಾಗಿ ಶಿಕ್ಷಣ ಇಲಾಖೆಯು ಆಲೂರಿನಲ್ಲಿರುವ ಏಕೋಪಾಧ್ಯಾಯ ಶಾಲೆಯನ್ನು ಮುಚ್ಚಲು ಈಗಾಗಲೇ ಆದೇಶಿಸಿತ್ತು. ಇದರ ವಿರುದ್ಧ ಪಾಲಕರು ಹಾಗೂ ಸ್ಥಳೀಯರು ಮುಂದೆ ಬಂದು ಶಾಸಕ ಸಿ.ಎಚ್.ಕುಂಞಂಬು ಅವರನ್ನು ಸಂಪರ್ಕಿಸಿದ್ದರು.
ಶಾಲೆಯನ್ನು ಉಳಿಸಿಕೊಳ್ಳುವುದಾಗಿ ಶಾಸಕರು ನೀಡಿದ ಭರವಸೆ ಮೇರೆಗೆ ಶಾಲೆಯ ಕಾರ್ಯಾಚರಣೆ ಮುಂದುವರಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು. ಆದರೆ ಕಳೆದ ಆಗಸ್ಟ್ 30 ರಂದು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂತೆರೊ ಅವರು ಶಾಲೆಯನ್ನು ಮುಚ್ಚಿ ಮಕ್ಕಳನ್ನು ಹತ್ತಿರದ ಇತರ ಶಾಲೆಗಳಿಗೆ ವರ್ಗಾಯಿಸುವಂತೆ ಲಿಖಿತ ಸೂಚನೆ ನೀಡಿದ್ದರು. ಆದರೆ ಶಾಲೆಯು ಇನ್ನೂ ಮಾನ್ಯತೆ ಮರುಸ್ಥಾಪನೆಯ ಭರವಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ನೌಕರರಿಗೆ ಸಂಬಳ ಸಿಗುತ್ತಿಲ್ಲ, ಮಕ್ಕಳಿಗೆ ಊಟ ಸಿಗುತ್ತಿಲ್ಲ. ಇದರಿಂದ ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಅತಂತ್ರತೆಯಲ್ಲಿ ಏಕೋಪಾಧ್ಯಾಯ ಶಾಲೆ: ಸ್ಥಳೀಯರಿಂದ ಪ್ರತಿಭಟನೆ
0
ಅಕ್ಟೋಬರ್ 19, 2022