ಕಾಸರಗೋಡು: ಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳ ಅ. 2ಮತ್ತು 3ರಂದು ಚೆರ್ಕಳ ಸರ್ಕಾರಿ ವೊಕೇಶನಲ್ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಜರುಗಲಿದೆ. ವಿಜ್ಞಾನ, ಗಣಿತಶಾಸ್ತ್ರ, ಸಾಮಾಜಿಕ ವಿಜ್ಞಾನ, ವೃತ್ತಿಪರಿಚಯ ಮೇಳ, ಐ.ಟಿ ಮೇಳ ನಡೆಯಲಿದ್ದು, Pಜಿಲ್ಲೆಯ 3ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಳ್ಗೊಳ್ಳಲಿದ್ದಾರೆ.
ಜಿಲ್ಲೆಯ ಏಳು ಉಪಜಿಲ್ಲೆಗಳ ಪ್ರೌಢಶಾಲೆ, ಹೈಯರ್‍ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಒಟ್ಟು 68ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಅ. 2ರಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮೇಳ ಉದ್ಘಾಟಿಸುವರು. ಕಾರ್ಯಕ್ರಮದ ಪ್ರಚಾರಾರ್ಥ ಸೋಮವಾರ ಚೆರ್ಕಳ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಿತು.
ನಾಳೆಯಿಂದ ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳ-ಡಂಗುರ ಮೆರವಣಿಗೆ
0
ಅಕ್ಟೋಬರ್ 31, 2022
Tags