ಉಪ್ಪಳ: ಭಾವನಾತ್ಮಕ ಬೆಂಬಲವನ್ನು ಪಡೆಯಲು ವಿಫಲರಾದ ವಿದ್ಯಾರ್ಥಿಗಳು ತಮ್ಮ ಉದ್ರೇಕ ಮತ್ತು ಕೋಪ ತಾಪಗಳನ್ನು ಬಗೆ ಹರಿಸಿಕೊಳ್ಳಲು ಮಾದಕದ್ರವ್ಯಗಳ ಚಟಕ್ಕೆ ಬಲಿಯಾಗುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗುತ್ತಾರೆ. ಆರಂಭದಲ್ಲಿ ಆಕರ್ಷಕವಾಗಿ, ಸುಖದಾಯಕವಾಗಿ ತೋರುವ ಮಾದಕದ್ರವ್ಯಗಳು ವ್ಯಕ್ತಿಯನ್ನು ಮತ್ತು ಅವನ ಭವಿಷ್ಯವನ್ನು ನಾಶಮಾಡುತ್ತವೆ ಎಂದು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ. ಎಸ್. ಹೇಳಿದರು.
ಶೇಣಿ ಶ್ರೀಶಾರದಾಂಬಾ ಹೈಯರ್ ಸೆಕಂಡರಿ ಶಾಲೆಯ ಎನ್. ಎಸ್. ಎಸ್. ಘಟಕವು ಪೆರ್ಲ ಪೇಟೆಯಲ್ಲಿ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಪಿಡುಗಿನ ನಿವಾರಣೆಗಾಗಿ ಕಟ್ಟುನಿಟ್ಟಿನ ನಿಯಮಾವಳಿದ್ದರೂ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿರುವ ಮಾದಕ ದ್ರವ್ಯಗಳನ್ನು ಬುಡ ಸಹಿತ ಕಿತ್ತೆಸೆಯುವ ನಿಟ್ಟಿನಲ್ಲಿ ಎನ್. ಎಸ್. ಎಸ್. ಘಟಕವು ಮಾದಕದ್ರವ್ಯ ವಿರೋಧಿ ಅಭಿಯಾನವನ್ನು ನಡೆಸಿರುವುದು ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಎನ್. ಎಸ್. ಎಸ್. ಘಟಕದ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪೆರ್ಲ ಚೆಕ್ ಪೋಸ್ಟ್ ನಿಂದ ಪೇಟೆಯವರೆಗೆ ಸಾಮೂಹಿಕ ಓಟ ನಡೆಸಿದರು. ಎನ್. ಎಸ್. ಎಸ್. ಯೋಜನಾಧಿಕಾರಿ ಸಂತೋμï ಕುಮಾರ್ ಕ್ರಾಸ್ತ ಅವರು ಎನ್. ಎಸ್. ಎಸ್. ಕಾರ್ಯದರ್ಶಿ ಜಿತೇಶ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು. ಅಬಕಾರಿ ವಿಭಾಗದ ಅಧಿಕಾರಿಗಳಾದ ಜನಾರ್ದನ ಮತ್ತು ರಾಜೀವ ಅವರು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ವಿಶೇಷ ತರಗತಿಗಳನ್ನು ನಡೆಸಿಕೊಟ್ಟರು. ನಂತರ ವಿದ್ಯಾರ್ಥಿಗಳು ಅಭಿನಯಿಸಿದ 'ಕಾವಲುಗಾರ' ಎಂಬ ಬೀದಿ ನಾಟಕವು ಜನರ ಗಮನವನ್ನು ಸೆಳೆಯಿತು. ನಿರ್ದೇಶಕ ಉದಯ ಸಾರಂಗ, ಸಹಾಯಕ ನಿರ್ದೇಶಕ ಜಯ ಮಣಿಯಂಪಾರೆ, ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಧಾಕೃಷ್ಣ ನಾಯಕ್, ಮಾಜಿ ಉಪಾಧ್ಯಕ್ಷೆ ಆಯಿμÁ ಎ. ಎ, ನಿವೃತ್ತ ಪ್ರಾಂಶುಪಾಲ ರವೀಂದ್ರನಾಥ್ ನಾಯಕ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ ಉಪಸ್ಥಿತರಿದ್ದರು. ಅಧ್ಯಾಪಕ ಡಾ. ಅನೀಶ್ ಕುಮಾರ್ ನಿರೂಪಿಸಿದರು. ಪ್ರಾಂಶುಪಾಲೆ ವಿಜಯಲಕ್ಷ್ಮಿ ಸ್ವಾಗತಿಸಿ, ವಿದ್ಯಾರ್ಥಿ ಸ್ಮøತಿ. ಎಸ್. ರೈ ವಂದಿಸಿದರು.
ಶೇಣಿ ಎನ್.ಎಸ್.ಎಸ್ ತಂಡದಿಂದ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ: ಜಾಗೃತಿ ಓಟ ಹಾಗೂ ಬಿದಿ ನಾಟಕ
0
ಅಕ್ಟೋಬರ್ 24, 2022