ಮುಳ್ಳೇರಿಯ: ಬೆಳ್ಳೂರು ಕೊಟ್ಟೂರಿನ ಅಕ್ಕರ ಫೌಂಡೇಶನ್ ಹಾಗೂ ಮುಂಡಕ್ಕಯಂ ಶ್ರೀ ಶಬರೀಷ ಕಾಲೇಜಿನ ಜಂಟಿ ಆಶ್ರಯದಲ್ಲಿ ಬೆಳ್ಳೂರು ಪಂಚಾಯತಿನಲ್ಲಿ ತಿಳುವಳಿಕಾ ತರಗತಿ ನಡೆಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಬೆಳ್ಳೂರು ಉದ್ಘಾಟಿಸಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಜನಪ್ರತಿನಿಧಿಗಳಿಗೆ ಮಕ್ಕಳ ವಿಕಲತೆಯನ್ನು ಮುಂದಾಗಿ ತಿಳಿಯುವ ಬಗ್ಗೆ ತರಗತಿ ನೀಡಲಾಯಿತು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದರು. ಜನಪ್ರತಿನಿಧಿಗಳು ಶುಭ ಹಾರೈಸಿದರು. ಜಿನಿಲ್ ರಾಜ್, ಫಾತಿಮಾತ್ ತಸ್ನಿಯ ಮೊದಲಾದವರು ತರಗತಿ ನಡೆಸಿದರು.
ಬೆಳ್ಳೂರು ಪಂಚಾಯತಿನಲ್ಲಿ ತಿಳುವಳಿಕಾ ತರಗತಿ
0
ಅಕ್ಟೋಬರ್ 08, 2022
Tags