HEALTH TIPS

ಬ್ರಿಟನ್ ‍ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ಆಯ್ಕೆ

 

             ಲಂಡನ್: ಬ್ರಿಟನ್ ಯುವ ರಾಜಕಾರಣಿ ಹಾಗೂ ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

                     ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್‌ಗೆ ಇದೀಗ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡಳಿತ ಮುನ್ನಡೆಸುವಂತಾಗಿದೆ.

                   ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯರಾಗಿದ್ದಾರೆ. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಅವರಿಗೆ ಬದಲಾದ ಬೆಳವಣಿಗೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಿದೆ.

                 ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಬ್ರಿಟನ್‌ನ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದರು. ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ.

                   ದೊಡ್ಡ ಸವಾಲಿನ ಸಮಯದಲ್ಲಿ ನಾವು ಒಗ್ಗೂಡಬೇಕು. ನಮ್ಮ ಮುಂದಿನ ಪ್ರಧಾನಿಯಾಗಲು ನಮ್ಮ ಸಂಸದೀಯ ಪಕ್ಷದ ಬಹುಪಾಲು ಬೆಂಬಲ ರಿಷಿ ಸುನಕ್ ಅವರಿಗೆ ಇದೆ ಎಂಬುದು ಸ್ಪಷ್ಟವಾಗಿದೆ. ಅವರು ಅದಕ್ಕಾಗಿ ಅಗತ್ಯವಾದ ಪರಿಣತಿ ಮತ್ತು ಅನುಭವವನ್ನು ಹೊಂದಿದ್ದಾರೆ ಎಂದು ಕನ್ಸರ್ವೇಟಿವ್ ಪಾರ್ಟಿ ನಿಕಟಪೂರ್ವ ಅಧ್ಯಕ್ಷ ಬ್ರಾಂಡನ್ ಲೇವಿಸ್ ಟ್ವೀಟ್ ಮಾಡಿದ್ದರು.

           ಬೋರಿಸ್ ಜಾನ್ಸನ್ ತಾವು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ಅವರ ದಾರಿ ಸುಗಮವಾಗಿತ್ತು.

              ಸೋಮವಾರ ಸಂಜೆ ರಿಷಿ ಸುನಕ್ ಅವರ ಅಧಿಕೃತ ಆಯ್ಕೆಬಗ್ಗೆ ಪ್ರಕಟಣೆ ಹೊರಬೀದ್ದಿತು. ರಿಷಿ ಸುನಕ್ ಅವರು ಅ.28 ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries