HEALTH TIPS

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ನಿಮಗೆ ಗೊತ್ತೆ?

 

             ನವದೆಹಲಿ:ಇತ್ತೀಚೆಗೆ ಕೇಂದ್ರ ಸರ್ಕಾರ ಅನೇಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಆದರೆ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಬದಲಾಗಿಲ್ಲ. ಅಕ್ಟೋಬರ್​​ 2022 ರಿಂದ ಡಿಸೆಂಬರ್ 2022ವರೆಗೆ ಸುಕನ್ಯಾ ಸಮೃದ್ಧಿ ಯೋಜನೆಯ ದರ 7.6% ಆಗಿಯೇ ಉಳಿಯಲಿದೆ.

                ಹಣಕಾಸು ಸಚಿವಾಲಯ ಸೆಪ್ಟೆಂಬರ್ 29ರಂದು ಕಳುಹಿಸಿದ್ದ ಸುತ್ತೋಲೆಯ ಪ್ರಕಾರ ಮೂರು ಸಣ್ಣ ಮಟ್ಟದ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 0.3%ವರೆಗೆ ಏರಿಸಲಾಗಿದೆ. ಇದು 2022 ರಿಂದ ಡಿಸೆಂಬರ್ 2022ರ ಅವಧಿಯವರೆಗೆ ಮಾತ್ರ ಇರಲಿದೆ.

              ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 7.6% ಹೆಚ್ಚಿಸಲಾಗಿದೆ. ಕಿಸಾನ್ ವಿಕಾಸ್ ಪಾತ್ರ ಯೋಜನೆಯಲ್ಲಿ ಬಡ್ಡಿ ದರವನ್ನು 7%ಗೆ ಏರಿಸಲಾಗಿದ್ದು 3 ವರ್ಷ ಅವಧಿಯ ಪೋಸ್ಟ್ ಆಫೀಸ್​ನ ಸ್ಥಿರ ಠೇವಣಿಯ ಬಡ್ಡಿ ದರವನ್ನು 5.8%ಗೆ ಹೆಚ್ಚಿಸಲಾಗಿದೆ. 2 ವರ್ಷ ಅವಧಿಯ ಸ್ಥಿರ ಠೇವಣಿಯನ್ನು 5.7%ಗೆ ಹೆಚ್ಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries