ಕಾಸರಗೋಡು: ಕರಾವಳಿ ರಕ್ಷಣೆಗಾಗಿ ನೆಲ್ಲಿಕುಂಜೆ ಕರಾವಳಿಯಲ್ಲಿ ನಿರ್ಮಿಸಿರುವ ಯು.ಕೆ ಯೂಸುಫ್ ಎಫೆಕ್ಟ್ ಸೀವೇವ್ ಬ್ರೇಕರ್ಸ್ ಯೋಜನೆಯನ್ನು ಸಚಿವ ರೋಶಿ ಆಗಸ್ಟಿನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಹಾಗೂ ವಿನೂತನ ಶೈಲಿಯ ಕರಾವಳಿ ಸಂರಕ್ಷಣಾ ವಿಧಾನ'ಸೀವೇವ್ ಬ್ರೇಕರ್' ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಕುರಿತು ಸಂಪುಟ ಸಭೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.
ಸಚಿವ ಅಹ್ಮದ್ ದೇವರಕೋವಿಲ್ ಬೀಚ್ ಗಾರ್ಡನ್ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಸರ್ಕಾರದ ಅನುಮತಿ ಪಡೆದು ಕೈಗಾರಿಕೋದ್ಯಮಿಯೂ ಆಗಿರುವ ಯು.ಕೆ.ಯೂಸುಫ್ ಅವರು ನೆಲ್ಲಿಕುನ್ ಕಟಪ್ಪುರಂನಲ್ಲಿ ಉಚಿತವಾಗಿ ಯೋಜನೆ ಜಾರಿಗೊಳಿಸಿದ್ದಾರೆ.
ಶಾಸಕ ಎನ್ ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್.ಕುಞಂಬು, ಎ.ಕೆ.ಎಂ.ಅಶ್ರಫ್, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಎಂ.ವಿನ್ಸೆಂಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ.ಮುನೀರ್, ಅಬ್ಬಾಸ್ ಬೇಗಂ, ಪಿ.ರಮೇಶನ್ ಉಪಸ್ಥಿತರಿದ್ದರು. ಕಾರ್ಯಖ್ರಮದ ಅಂಗವಾಗಿ ಹಿನ್ನೆಲೆ ಗಾಯಕರಾದ ಅನ್ಸಾರ್ ಕೊಚ್ಚಿನ್ ಮತ್ತು ಯುಮ್ನಾ ನೇತೃತ್ವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಸಮುದ್ರ ಕೊರೆತ ತಡೆಗೆ ವಿಶಿಷ್ಟ ಯೋಜನೆ: ಸೀವೇವ್ ಬ್ರೇಕರ್ಸ್ ಲೋಕಾರ್ಪಣೆ
0
ಅಕ್ಟೋಬರ್ 28, 2022