ಕಾಸರಗೋಡು: ಬೇಕಲ ಪ್ರವಾಸೋದ್ಯಮವನ್ನು ಉನ್ನತಿಗೇರಿಸಲು ಪ್ರಸಕ್ತ ಇರುವ ಪ್ರವಾಸೋದ್ಯಮಗಳ ಜತೆಗೆ ಹೊಸ ಆಕರ್ಷಣೆ ಮತ್ತು ವಿಶಿಷ್ಟ ಪರಿಕಲ್ಪನೆಗಳೊಂದಿಗೆ ಬೇಕಲ ಪ್ರವಾಸೋದ್ಯಮ ಗ್ರಾಮವನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ-ಲೋಕೋಪಯೋಗಿ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಜನೂರು ಪಂಚಾಯಿತಿಯ 32ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಗ್ರಾಮ ತಲೆಯೆತ್ತಲಿದ್ದು, ಇದಕ್ಕಾಗಿ ಪ್ರಾಥಮಿಕ ಹಂತದ ಕೆಲಸಗಳು ಆರಂಭಗೊಂಡಿದೆ. ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು, ಬೇಕಲಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಯೋಜನೆಗಳನ್ನು ಪರಿಶೀಲಿಸಿದ ನಂತರ ಕೃಷಿ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಸಾಂಸ್ಕøತಿಕ ಪ್ರವಾಸೋದ್ಯಮ ಇತ್ಯಾದಿಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಘುವ ರೀತಿಯಲ್ಲಿ ಯೋಜನೆ ಹಮ್ಮಿಕೊಳ್ಳಲಾಗುವುದು.
ಜಿಲ್ಲೆಗೆ ಬರುವ ಪ್ರವಾಸಿಗರನ್ನು ಇಲ್ಲಿ 24 ಗಂಟೆಗಳ ಕಾಲ ಕಳೆಯುವಂತೆ ಮಾಡುವ ನಿಟ್ಟಿನಲ್ಲಿ ಮೂಲಸೌಕರ್ಯ ಹೆಚ್ಚಿಸಬೇಕಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ವಸತಿ ಸೌಕರ್ಯಗಳ ಕೊರತೆಯಿದ್ದು, ಪ್ರವಾಸೋದ್ಯಮ ಗ್ರಾಮ ಯೋಜನೆ ಸಾಕಾರಗೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಲಭ್ಯವಾಗಲಿದೆ. ಹೆಚ್ಚಿನ ಹೋಮ್ ಸ್ಟೇಗಳಿಗೆ ಇಲ್ಲಿ ವಿಪುಲ ಅವಕಾಶಗಳಿದ್ದು, ಕೇರಳಕ್ಕೆ ಬರುವ ಹೆಚ್ಚಿನ ಪ್ರವಾಸಿಗರು ಮಲಬಾರ್ ಪ್ರದೇಶಕ್ಕೆ ಭೇಟಿ ನೀಡುವ ರೀತಿಯಲ್ಲಿ ಮಲಬಾರ್‍ನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಬೀಚ್ ಫೆಸ್ಟ್-ಲಾಂಚನ ಬಿಡುಗಡೆ:
ಡಿಸೆಂಬರ್‍ನಲ್ಲಿ ನಡೆಯಲಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಲಾಂಛನ ಮತ್ತು ಪೆÇ್ರೀಮೋ ವಿಡಿಯೋವನ್ನು ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಹಾಗೂ ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ.ನೂಹ್ ಲಾಂಛನ ಸ್ವೀಕರಿಸಿದರು. ಶಾಸಕ ಸಿ.ಎಚ್ ಕುಞಂಬು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಉದುಮ ಗ್ರಾ.ಪಂಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಬಿಆರ್ ಡಿಸಿ ಎಂಡಿ ಪಿ.ಶಿಜಿನ್ ಉಪಸ್ಥಿತರಿದ್ದರು.
ಬೇಕಲದಲ್ಲಿ ಸಮಗ್ರ ಪ್ರವಾಸಿ ಯೋಜನೆ ಜಾರಿಗೆ ರೂಪುರೇಷೆ: ಪ್ರವಾಸೋದ್ಯಮ ಗ್ರಾಮಕ್ಕೆ ಚಾಲನೆ: ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಹೇಳಿಕೆ
0
ಅಕ್ಟೋಬರ್ 08, 2022