ತಿರುವನಂತಪುರಂ: ಹಿಂದಿ ಭಾಷೆಯ ಹೇರುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲವೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ
ಸರಕಾರದ ಸೇವಾ ನೇಮಕಾತಿ ಪರೀಕ್ಷೆಗಳಿಗೆ ಹಿಂದಿಯನ್ನು ಭಾಷಾ ಮಾಧ್ಯಮವಾಗಿ ಅಳವಡಿಸಲು
ಹಾಗೂ ಐಐಟಿ (ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ) ಹಾಗೂ ಐಐಎಂ ( ಭಾರತೀಯ
ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್) ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ
ಹಿಂದಿಯನ್ನು ಕಡ್ಡಾಯ ಕಲಿಕೆಯ ಭಾಷೆಯಾಗಿ ಮಾಡಲು ಸಂಸತ್ನ ಅಧಿಕೃತ ಭಾಷಾ ಸಮಿತಿಯು
ಶಿಫಾರಸು ಮಾಡಿದೆ ಎಂಬ ವರದಿಗಳಿಗೆ ಸಂಬಂಧಿಸಿಂತೆ ಕೇರಳ ಸರಕಾರದ ನಿಲುವನ್ನು ವಿವರಿಸಲು
ಪಿಣರಾಯಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಸಾಂಸ್ಕೃತಿಕ ಹಾಗೂ ಭಾಷಾ
ವೈವಿಧ್ಯತೆಯನ್ನು ಪ್ರತಿಪಾದಿಸುವ 'ವಿವಿಧತೆಯಲ್ಲಿ ಏಕತೆ' ಎಂಬ ಪರಿಕಲ್ಪನೆಯಲ್ಲಿ ಭಾರತದ
ಅಂತಃಸತ್ವವಿದೆ. ಈ ಚಿಂತನೆಯ ಅಳವಡಿಕೆ, ಭಾರತದ ಭ್ರಾತೃತ್ವ, ಸಹಿಷ್ಣುತೆ ಹಾಗೂ
ವಿಭಿನ್ನ ಜನರ ನಡುವೆ ಗೌರವ ಭಾವನೆ ಇವು ನಮ್ಮ ದೇಶವನ್ನು ಸುಸ್ಥಿರಗೊಳಿಸುತ್ತದೆ ಎಂದು
ಪಿಣರಾಯಿ ತಿಳಿಸಿದ್ದಾರೆ. ಯಾವುದೇ ಒಂದು ಭಾಷೆಯನ್ನು ಇತ ಭಾಷೆಗಿಂತ ಹೆಚ್ಚು
ಉತ್ತೇಜಿಸುವುದರಿಂದ ಈ ದೇಶದ ಏಕತೆಯು ನಾಶವಾಗುತ್ತದೆ ಎಂದವರು
ಹೇಳಿದರು.ತಿರುವನಂತಪುರಂ,ಅ.12: ಹಿಂದಿ ಭಾಷೆಯ ಹೇರುವ ಕೇಂದ್ರ ಸರಕಾರದ ಪ್ರಯತ್ನಗಳನ್ನು
ಒಪ್ಪಲು ಸಾಧ್ಯವಿಲ್ಲವೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ
ಪ್ರಧಾನಿ ನರೇಂದ್ರಮೋದಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಸೇವಾ ನೇಮಕಾತಿ ಪರೀಕ್ಷೆಗಳಿಗೆ ಹಿಂದಿಯನ್ನು ಭಾಷಾ ಮಾಧ್ಯಮವಾಗಿ ಅಳವಡಿಸಲು ಹಾಗೂ ಐಐಟಿ (ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ) ಹಾಗೂ ಐಐಎಂ ( ಭಾರತೀಯ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್) ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯ ಕಲಿಕೆಯ ಭಾಷೆಯಾಗಿ ಮಾಡಲು ಸಂಸತ್ನ ಅಧಿಕೃತ ಭಾಷಾ ಸಮಿತಿಯು ಶಿಫಾರಸು ಮಾಡಿದೆ ಎಂಬ ವರದಿಗಳಿಗೆ ಸಂಬಂಧಿಸಿಂತೆ ಕೇರಳ ಸರಕಾರದ ನಿಲುವನ್ನು ವಿವರಿಸಲು ಪಿಣರಾಯಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆಯನ್ನು ಪ್ರತಿಪಾದಿಸುವ 'ವಿವಿಧತೆಯಲ್ಲಿ ಏಕತೆ' ಎಂಬ ಪರಿಕಲ್ಪನೆಯಲ್ಲಿ ಭಾರತದ ಅಂತಃಸತ್ವವಿದೆ. ಈ ಚಿಂತನೆಯ ಅಳವಡಿಕೆ, ಭಾರತದ ಭ್ರಾತೃತ್ವ, ಸಹಿಷ್ಣುತೆ ಹಾಗೂ ವಿಭಿನ್ನ ಜನರ ನಡುವೆ ಗೌರವ ಭಾವನೆ ಇವು ನಮ್ಮ ದೇಶವನ್ನು ಸುಸ್ಥಿರಗೊಳಿಸುತ್ತದೆ ಎಂದು ಪಿಣರಾಯಿ ತಿಳಿಸಿದ್ದಾರೆ. ಯಾವುದೇ ಒಂದು ಭಾಷೆಯನ್ನು ಇತ ಭಾಷೆಗಿಂತ ಹೆಚ್ಚು ಉತ್ತೇಜಿಸುವುದರಿಂದ ಈ ದೇಶದ ಏಕತೆಯು ನಾಶವಾಗುತ್ತದೆ ಎಂದವರು ಹಳಿದು.
ಶಿಕ್ಷಣದ ವಿಷಯದಲ್ಲಿ ಕೇಂದ್ರ ಸರಕಾರವು ರಾಜ್ಯವು ಕೈಗೊಳ್ಳುವ ನೀತಿಗಳನ್ನು ಒಪ್ಪಿಕೊಳ್ಳಬೇಕು ಎಂದು ಪಿಣರಾಯಿ ಪತ್ರದಲ್ಲಿ ತಿಳಿಸಿದ್ದಾರೆ. ಉದ್ಯೋಗ ನೇಮಕಾತಿ ಪರಕ್ಷೆಯನ್ನು ಹಿಂದಿಯಲ್ಲಿ ನಡೆಸುವುದರಿಂದ ದೇಶ ಒಂದು ದೊಡ್ಡ ಶೇಕಡವಾರು ಪ್ರಮಾಣದಷ್ಟು ಯುವಜನರಿಗೆ ಉದ್ಯೋಗವನ್ನು ನಿರಾಕರಿಸಿದಂತಾಗುತ್ತದೆ. ಇದಕ್ಕಿಂತಲೂ ಹೆಚ್ಚಾಗಿ, ಹಿಂದಿಯ ಹೇರಿಕೆಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾದುದಾಗಿದೆ ಎಂದು ಪಿಣರಾಯಿ ಪತ್ರದಲ್ಲಿ ತಿಳಿಸಿದ್ದಾರೆ.ಹಿಂದಿ ಭಾಷೆಯ ಹೇರಿಕೆಯ ಪ್ರಯತ್ನಗಳನ್ನು ಕೇಂದ್ರ ಸರಕಾರವು ಹಿಂತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.