ಕೊಲ್ಲಂ: ಸಾಲದ ಸುಳಿಯಲ್ಲಿ ಸಿಲುಕಿದ್ದ ಕೊಲ್ಲಂ ಮೈನಾಗಪಳ್ಳಿ ಶಾನವಾಸ್ ಮಂಸಿಲ್‍ನ ಪೂಕುನ್ನ್ ಎಂಬವರಿಗೆ ಅದೃಷ್ಟ ದೇವತೆ ಲಾಟರಿ ರೂಪದಲ್ಲಿ ಅರಸಿ ಬಂದಿರುವುದು ಸಾಮಾನ್ಯವಾಗಿಯೇನೂ ಅಲ್ಲ.
ಬ್ಯಾಂಕ್ ನ ಜಪ್ತಿ ನೋಟಿಸ್ ಬಂದಿದ್ದು ಏನು ಮಾಡಬೇಕೆಂದು ತೋಚದೆ ಇದ್ದಾಗ ಕೇರಳದ ಅಕ್ಷಯ ಲಾಟರಿಯಲ್ಲಿ ಪ್ರಥಮ ಬಹುಮಾನ ಬಂದಿರುವುದು ತಿಳಿಯಿತು. ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ಯುವಕನಿಗೆ ಲಾಟರಿ ಖರೀದಿಸಿದ್ದರು. 2 ಗಂಟೆಗೆ ಜಪ್ತಿ ನೋಟಿಸ್ ಬಂದಿದ್ದು, 3:30ಕ್ಕೆ ಲಾಟರಿ ಫಲಿತಾಂಶ ಪ್ರಕಟವಾದಾಗ ಭಾಗ್ಯದೇವತೆ ಒಲಿದುಬಂದಿರುವುದು ಕಾಕತಾಳಿಯ ವಿದ್ಯಮಾನವಾಯಿತು.
ಮೀನು ಮಾರಾಟ ಮಾಡಿ ವಾಪಸ್ಸಾಗುವಾಗ ಪ್ಲಾಮೂಟ್ ಮಾರುಕಟ್ಟೆಯಲ್ಲಿ ಲಾಟರಿ ಮಾರುತ್ತಿದ್ದ ವೃದ್ದರೋರ್ವರ ಕೈಯಿಂದ ಲಾಟರಿ ಟಿಕೆಟ್ ಖರೀದಿಸಿದ್ದರು. ಮನೆಗೆ ತಲುಪಿದಾಗ ಕಾಪೆರ್Çರೇಷನ್ ಬ್ಯಾಂಕ್ ಕರುನಾಗಪಳ್ಳಿ ಕುಟ್ಟಿ ವಟ್ಟಂ ಶಾಖೆಯಿಂದ ಸಾಲದ ಬಾಕಿ ನೋಟಿಸ್ ಬಂದಿತ್ತು.
ಏಳು ವರ್ಷಗಳ ಹಿಂದೆ ಮನೆ ಖರೀದಿಸಲು ಬ್ಯಾಂಕ್ ನಲ್ಲಿ 7.45 ಲಕ್ಷ ಸಾಲ ಪಡೆದಿದ್ದರು. ಬಳಿಕ ಅದು ಬರೋಬ್ಬರಿ ಒಂಬತ್ತು ಲಕ್ಷಕ್ಕೆ ತಲುಪಿತ್ತು. ನೋಟೀಸ್ ಸಿಕ್ಕಿ ಏನು ಮಾಡಬೇಕೆಂದು ತೋಚದಿರುವ ಅಲ್ಪಹೊತ್ತಲ್ಲಿ ಲಾಟರಿಯ ಪ್ರಥಮ ಬಹುಮಾನ ಬಂದಿದೆ ಎಂದು ಮಾಹಿತಿ ಲಭ್ಯವಾಯಿತು. ಟಿಕೆಟ್ ಸಂಖ್ಯೆ ಇ.ಝಡ್ 90704ಡ್ಟಿಕೆಟ್ ಸಂಖ್ಯೆಗೆ ಬಹುಮಾನ 70 ಲಕ್ಷ ಲಭಿಸಿರುವುದನ್ನು ಆರಂಭದಲ್ಲಿ ಪೂಕುನ್ನನ್ ನಂಬಿರಲಿಲ್ಲ. ಕೇರಳ ಅಕ್ಷಯ ಲಾಟರಿಯ ಪ್ರಥಮ ಬಹುಮಾನ ತನಗೇ ಒಲಿದಿರುವುದು ಖಾತ್ರಿಯಾದಂತೆ ಸಂತಸ ಮುಗಿಲುಮುಟ್ಟಿತ್ತು.
ಜಪ್ತಿ ನೋಟೀಸು ಬಂದ ಬೆನ್ನಿಗೇ ಹಿಂಬಾಲಿಸಿದ ಅದೃಷ್ಟ ಲಕ್ಷ್ಮಿ: ಮೂರೇ ಗಂಟೆಗಳಲ್ಲಿ ಜೀವನ ಬದಲಾದ ಮೀನು ಮಾರಾಟಗಾರ ಶಾನವಾಸ್ ಗೆ ಒಲಿದ ಅದೃಷ್ಟ
0
ಅಕ್ಟೋಬರ್ 13, 2022
Tags