ತಿರುವನಂತಪುರ: ಡ್ರಗ್ಸ್ ದಂಧೆಯ ಹಿಂದೆ ಭೂಗತ ಮಾಫಿಯಾಗಳ ಕೈವಾಡವಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ಬಿಂದು ಹೇಳಿದ್ದಾರೆ. ಕ್ರಿಯಾಸೇನೆ ಆರಂಭದ ಕುರಿತು ಮಾತನಾಡಿದ ಸಚಿವರು, ಮಾದಕ ವ್ಯಸನದ ವಿರುದ್ಧ ರಾಜಿಯಿಲ್ಲದ ಹೋರಾಟದ ಅಗತ್ಯವಿದೆ ಎಂದರು.
ಎನ್ ಸಿಸಿ ಮತ್ತು ಎನ್ ಎಸ್ ಎಸ್ ಸ್ವಯಂಸೇವಕರನ್ನು ಸಂಘಟಿಸಿ ನೂತನ ಕ್ರಿಯಾಸೇನೆ ಆರಂಭಿಸಲಾಗಿದೆ.
'ಅಸಾದ್' ಎಂಬುದು ಮಾದಕ ವ್ಯಸನದ ವಿರುದ್ಧÁ್ಕರ್ಯವೆಸಗುವ ಕ್ರಿಯಾ ಸೇನೆಯ ಹೆಸರು. ತಿರುವನಂತಪುರದಲ್ಲಿ ನಡೆದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಶಾಲಾ-ಕಾಲೇಜುಗಳ ಎನ್‍ಎಸ್‍ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಮಾದಕ ವ್ಯಸನದ ವಿರುದ್ಧ ಕೇರಳದ ಜನ್ಮದಿನವಾದ ನವೆಂಬರ್ 1 ರಂದು ರಾಜ್ಯಾದ್ಯಂತ ಮಾನವ ಸರಪಳಿ ರಚಿಸಲಾಗುವುದು. ಸಾಂಕೇತಿಕವಾಗಿ ಅಮಲು ಪದಾರ್ಥಗಳನ್ನು ಸುಡುವ ಮೂಲಕ ರಕ್ಷಣೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೇರಳವು ಮಾದಕ ದ್ರವ್ಯ ಮತ್ತು ಅಮಲಿನ ಕೇಂದ್ರವಾಗಿರುವುದರಿಂದ ರಾಜ್ಯದಲ್ಲಿ ಅದರ ವಿರುದ್ಧದ ಹೋರಾಟವು ಬಲಗೊಳ್ಳುತ್ತಿದೆ. ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕರನ್ನು ಸಂಘಟಿಸುವ ಮೂಲಕ ಹೊಸ ಕ್ರಿಯಾಸೇನೆಯನ್ನು ಪ್ರಾರಂಭಿಸಲಾಗಿದೆ. ಮಾದಕ ವಸ್ತು ವ್ಯಾಪಾರವು ಯಾವ ಕಾರಣಕ್ಕೂ ಪುರಸ್ಕರಿಸಲಾಗದೆಂದು ಸಚಿವೆ ಆರ್ ಬಿಂದು ಹೇಳಿದರು. ಡ್ರಗ್ಸ್ ದಂಧೆಯ ಹಿಂದೆ ಭೂಗತ ಲೋಕದ ಮಾಫಿಯಾ ಕೈವಾಡವಿದೆ. ಮಾದಕ ವ್ಯಸನದ ವಿರುದ್ಧ ರಾಜಿಯಿಲ್ಲದ ಹೋರಾಟದ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಡ್ರಗ್ಸ್ ದಂಧೆಯ ಹಿಂದೆ ಭೂಗತ ಮಾಫಿಯಾಗಳು: ಕೇರಳ ಜನ್ಮದಿನದಂದು ಮಾನವ ಸರಪಳಿ ರಚಿಸಲಾಗುವುದು; ಸಚಿವೆ ಆರ್ ಬಿಂದು
0
ಅಕ್ಟೋಬರ್ 27, 2022
Tags