ಪೆರ್ಲ: ನೃತ್ಯ ಭಜನಾ ತರಬೇತಿ ಕಾರ್ಯಕ್ರಮ ಪೆರ್ಲ ಶ್ರೀ ಅಯ್ಯಪ್ಪ ಮಂದಿರದಲ್ಲಿ ಬುಧವಾರ ಆರಂಭಗೊಂಡಿತು. ವಿಜಯ ದಶಮಿ ದಿನದಂದು ಶ್ರೀ ಅಯ್ಯಪ್ಪ ಸವಾಮಿ ಭಜನಾ ಸಂಘದ ನೇತೃತ್ವದಲ್ಲಿ ನೃತ್ಯ ಭಜನೆ ಶುಭಾರಂಭಗೊಂಡಿದೆ. ದೀಕ್ಷಿತ್ ಧರ್ಮತ್ತಡ್ಕ ಅವರು ನೃತ್ಯಭಜನಾ ತರಬೇತಿ ನೀಡುತ್ತಿದ್ದಾರೆ. ತರಬೇತಿಯಲ್ಲಿ ಮೂವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಮಡಿದ್ದರು. ಪ್ರತಿ ಶನಿವಾರ ಸಂಜೆ 4ರಿಂದ ಭಜನಾ ನೃತ್ಯ ತರಬೇತಿ ನಡೆಯಲಿರುವುದಾಗಿ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೆರ್ಲ ಶ್ರೀ ಅಯ್ಯಪ್ಪ ಮಂದಿರದಲ್ಲಿ ನೃತ್ಯ ಭಜನಾ ತರಬೇತಿ ಆರಂಭ
0
ಅಕ್ಟೋಬರ್ 05, 2022