ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ ಇವರು ಇಬ್ಬರು ಮಹಾನ್ ವ್ಯಕ್ತಿಗಳ ಕಿರುಪರಿಚಯವನ್ನು ಮಾಡಿದರು. ಬಳಿಕ 7ನೇ ತರಗತಿ ವಿದ್ಯಾರ್ಥಿ ದೀಪಕ್.ಪಿ.ಎಸ್ ಮಹಾತ್ಮ ಗಾಂಧೀಜಿ ಯವರ ಮತ್ತು ನವ್ಯಶ್ರೀ. ಎಂ. ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.ಹಿರಿಯ ಅಧ್ಯಾಪಕರು ಎಸ್.ಎನ್.ವೆಂಕಟವಿದ್ಯಾಸಾಗರ್ ರವರು ಗಾಂಧೀ ಹಾಗೂ ಶಾಸ್ತ್ರೀ ಇಬ್ಬರು ಸ್ವಾತಂತ್ರ್ಯ ಹೋರಾಟಗಾರ ಜೀವನದ ಕೆಲವು ಘಟನೆಯನ್ನು ಪರಿಚಯಿಸಿದರು. ಗಾಂಧೀಜಿಯವರ ಪ್ರಾರ್ಥನೆ ರಘುಪತಿ ರಾಘವ ಹಾಡನ್ನು ಎಲ್ಲರೂ ಒಟ್ಟಾಗಿ ಹಾಡಿದರು. ಬಳಿಕ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಸ್ವರ್ಗ. ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಆಚಣೆ
0
ಅಕ್ಟೋಬರ್ 04, 2022
Tags