ನವದೆಹಲಿ: ಭಾರತವು ಸೌರ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು, ನಮ್ಮ ಸಾಧನೆಗೆ ಜಗತ್ತು ಬೆರಗುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಮನ್ ಕಿ ಬಾತ್'ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ, ಇಸ್ರೊ 36 ಸ್ಯಾಟ್‌ಲೈಟ್‌ಗಳನ್ನು ಸತತವಾಗಿ ಅಂತರಿಕ್ಷಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿರುವುದನ್ನು ಶ್ಲಾಘಿಸಿದ್ದಾರೆ ಮತ್ತು ಇದನ್ನು ದೇಶಕ್ಕೆ ಯುವಕರಿಂದ 'ದೀಪಾವಳಿ ವಿಶೇಷ ಕೊಡುಗೆ'ಎಂದು ಬಣ್ಣಿಸಿದ್ದಾರೆ.
ಈ ಯಶಸ್ಸಿನೊಂದಿಗೆ ದೇಶದಲ್ಲಿ ಡಿಜಿಟಲ್ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ. ದೇಶದ ಅತ್ಯಂತ ಕುಗ್ರಾಮ ಕೂಡ ಇತರ ಭಾಗದೊಂದಿಗೆ ಸಂಪರ್ಕ ಪಡೆಯಲಿದೆ ಎಂದು ಮೋದಿ ತಿಳಿಸಿದ್ದಾರೆ.
'ದೇಶವು ಆತ್ಮ ನಿರ್ಭರವಾದಾಗ, ಯಶಸ್ಸಿನ ಹೊಸ ಎತ್ತರ ತಲುಪುತ್ತದೆ. ಒಮ್ಮೆ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ನಿರಾಕರಿಸಲಾಗಿತ್ತು. ಆದರೆ ಇಲ್ಲಿನ ವಿಜ್ಞಾನಿಗಳು ಅಂತಹ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಸಾಧನೆ ನಮ್ಮ ಆತ್ಮ ನಿರ್ಭರತೆಗೆ ಒಂದು ಉದಾಹರಣೆ' ಎಂದು ಅವರು ಹೇಳಿದ್ದಾರೆ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಭಾರತ ಕೆಲಸ ಮಾಡುತ್ತಿದೆ. ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.