ಉಪ್ಪಳ: ಉಪ್ಪಳ ಅಗ್ನಿಶಾಮಕ ಠಾಣೆಯಲ್ಲಿ ಬುಧವಾರ ಮಾದಕ ವಸ್ತು ವಿರೋಧಿ ಅಭಿಯಾನ ನಡೆಯಿತು. ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಆರೋಗ್ಯ ನಿರೀಕ್ಷಕ ಎಂ.ಹರೀಶ್ ಉದ್ಘಾಟಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಕೆ.ವಿ.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ, ನಾಗರಿಕ ರಕ್ಷಣಾ ಸ್ವಯಂಸೇವಕರು ಮತ್ತು ಕುಟುಂಬ ಸದಸ್ಯರು ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಮಾಡಿದರು. ಸಿವಿಲ್ ಡಿಫೆನ್ಸ್ ಪೋಸ್ಟ್ ವಾರ್ಡನ್ ಆರ್.ಬಿನೇಶ್ ಮಾತನಾಡಿದರು. ಎಂ.ಬಿ.ಸುನೀಲ್ ಕುಮಾರ್ ಸ್ವಾಗತಿಸಿ, ಕೆ.ಆರ್.ಸಂದೀಪ್ ವಂದಿಸಿದರು. ಮಾದಕ ವಸ್ತು ವಿರೋಧಿ ಸಹಿ ಸಂಗ್ರಹವನ್ನೂ ಈ ಸಂದರ್ಭ ನಡೆಸಲಾಯಿತು.
ಮಾದಕ ವಸ್ತು ವಿರೋಧಿ ಅಭಿಯಾನ ಹಾಗೂ ಸಹಿ ಸಂಗ್ರಹ
0
ಅಕ್ಟೋಬರ್ 20, 2022
Tags