ಕುಂಬಳೆ: ಪುನರ್ ನಿರ್ಮಾಣಗೊಳ್ಳುತ್ತಿರುವ ಬಂದ್ಯೋಡು ಸಮೀಪದ ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು. ಈ ಬಗ್ಗೆ ಜರಗಿದ ಭಕ್ತರ ಸಭೆಯಲ್ಲಿ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯನ್ನು ಘೋಷಿಸಿದ ಸ್ವಾಮೀಜಿಯವರು ಆಶೀವರ್ಚನ ನೀಡಿ, ನಮ್ಮ ಜೀವಿತಾವಧಿಯಲ್ಲಿ ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಒದಗಿ ಬಂದಿರುವುದು ನಮ್ಮೆಲ್ಲರ ಭಾಗ್ಯ. ನಾವೆಲ್ಲರೂ ಈ ಪುಣ್ಯಪ್ರದ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ನುಡಿದರು. ಬ್ರಹ್ಮಕಲಶೋತ್ಸವದ ಪ್ರಚಾರಕ್ಕಾಗಿ ಬಜೆ ಶ್ರೀಕೃಷ್ಣ ಮಯ್ಯರು ತಯಾರಿಸಿದ ಪ್ರಚಾರ ಫಲಕವನ್ನು ಇದೇ ವೇಳೆ ಶ್ರೀಗಳು ಬಿಡುಗಡೆಗೊಳಿಸಿದರು.
ವಿವಿಧ ಕ್ಷೇತ್ರಗಳ ಪ್ರಮುಖರು, ದಾನಿಗಳು ಹಾಗೂ ಊರ ಪರವೂರ ಭಕ್ತಜನರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಹರಿನಾರಾಯಣ ಮಯ್ಯ ಅವರು ದೇವಸ್ಥಾನದ ಶಿಲಾನ್ಯಾಸದಿಂದ ತೊಡಗಿ ಇದುವರೆಗೆ ನಡೆದ ಕೆಲಸಕಾರ್ಯಗಳ ಬಗ್ಗೆ ಸಹಕರಿಸಿದ ಎಲ್ಲಾ ದಾನಿಗಳ ಮತ್ತು ಸ್ವಯಂಸೇವಕರ ಸೇವಾ ಚಟುವಟಿಕೆಗಳನ್ನು ತಿಳಿಸಿದರು. ಅಲ್ಲದೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಯರಾಮ ಶೆಟ್ಟಿ ಕಳೀಲು ವಂದಿಸಿದರು.
ಬಜೆ ದೇಲಂತೊಟ್ಟು ಕ್ಷೇತ್ರದಲ್ಲಿ ಬ್ರಹ್ಮಕಲಶ ಸಮಿತಿ ರಚನೆ
0
ಅಕ್ಟೋಬರ್ 12, 2022