HEALTH TIPS

ಕಾರ್ಯನಿಲ್ಲಿಸಿದ ಮಂಗಳಯಾನ ಕಕ್ಷೆಗಾಮಿ: ಇಸ್ರೊ ಮಾಹಿತಿ

 

           ಬೆಂಗಳೂರು: ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದ್ದ ಇಸ್ರೊದ 'ಮಂಗಳಯಾನ' ಕಕ್ಷೆಗಾಮಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

               ಬ್ಯಾಟರಿಗಳು ಬರಿದಾಗಿರುವುದರಿಂದ ಕಕ್ಷೆಗಾಮಿಯು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮೂಲಗಳು ತಿಳಿಸಿವೆ.

               'ಸದ್ಯ ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಬರಿದಾಗಿದೆ. ಜತೆಗೆ ಸಂಪರ್ಕವೂ ಕಡಿತಗೊಂಡಿದೆ' ಎಂದು ಇಸ್ರೊ ಮೂಲಗಳು ತಿಳಿಸಿವೆ. ಆದರೆ, ಇಸ್ರೊ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

                   'ಮಂಗಳಯಾನದ ಕಕ್ಷೆಗಾಮಿಯು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿ ಎಂಟು ವರ್ಷಗಳಾಗಿತ್ತು. ಕೇವಲ ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅವಧಿ ಮೀರಿ ಈ ಕಕ್ಷೆಗಾಮಿ ಕಾರ್ಯನಿರ್ವಹಿಸಿದೆ. ಇದು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ಪೂರೈಸಿದ್ದು, ಮಹತ್ವದ ವೈಜ್ಞಾನಿಕ ಫಲಿತಾಂಶಗಳನ್ನು ಒದಗಿಸಿದೆ' ಎಂದು ಮೂಲಗಳು ತಿಳಿಸಿವೆ.

                 2013 ರ ನವೆಂಬರ್‌ 5 ರಂದು ₹450 ಕೋಟಿ ವೆಚ್ಚದ ಮಂಗಳಯಾನ ಯೋಜನೆ ಕಾರ್ಯ ರೂಪಕ್ಕೆ ಬಂದಿತ್ತು. 'ಪಿಎಸ್‌ಎಲ್‌ವಿ-ಸಿ25' ರಾಕೆಟ್‌ ಮೂಲಕ 2014ರ ಸೆ.24 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯಲ್ಲಿ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಲಾಗಿತ್ತು. ಎಂಟು ವರ್ಷಗಳ ಅವಧಿಯಲ್ಲಿ ಆ ಗ್ರಹದ ಚಿತ್ರಗಳೂ ಸೇರಿ ಸಾಕಷ್ಟು ಮಾಹಿತಿಗಳನ್ನು ಭೂಮಿಗೆ ಕಳುಹಿಸಿತ್ತು.

                 ಮೊದಲ  ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಸೇರಿಸುವ ಮೂಲಕ ಇಸ್ರೊ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries