ಮಂಜೇಶ್ವರ : ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶ ಕಂಡ ಮಹಾನ್ ಧೀಮಂತ ನಾಯಕಿ. ಇಂದಿರಾ ಗಾಂಧಿ 16 ವರ್ಷಗಳ ಕಾಲ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ಬಾಲ್ಯದಿಂದ ಅಪಾರ ದೇಶ ಭಕ್ತಿ ಬೆಳೆಸಿಕೊಂಡಿದ್ದ ಅವರು ಸ್ವಾತಂತ್ರ್ಯ ಹೋರಾಟಗಾರರ ಜತೆಯಲ್ಲೇ ಬೆಳೆದಿದ್ದರು. ಇಂದಿರಾ ಗಾಂಧಿ ಬಡವರ ಪಾಲಿನ ನಿಜ ದೇವತೆ ಎಂದು ಮಾಜಿ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿರುವರು.
ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಜರುಗಿದ ಇಂದಿರಾ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪುμÁ್ಪರ್ಚನೆಗೈದು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ ಅಧ್ಯಕ್ಷತೆ ವಹಿಸಿದ್ಜರು. ಕಾಂಗ್ರೆಸ್ ಮುಖಂಡರಾದ ಕೃಷ್ಣ ಅಡ್ಕತ್ತೊಟ್ಟಿ, ದಾಮೋದರ ಮಾಸ್ತರ್ ತಲೇಕಳ, ಖಲೀಲ್ ಬಜಾಲ್, ವಿನೋದ್ ಕುಮಾರ್ ಪಾವೂರು, ರಝಾಕ್ ಹೊಸಂಗಡಿ, ಶಾಹುಲ್ ಅಮೀರ್, ಅಶ್ರಫ್ ಮುಲ್ಲುಗುರಿ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಆರೀಫ್ ಮಚ್ಚಂಪಾಡಿ ಸ್ವಾಗತಿಸಿ, ಜಗದೀಶ್ ಮೂಡಂಬೈಲು ವಂದಿಸಿದರು.
ಇಂದಿರಾ ಗಾಂಧಿ ಬಡವರ ಪಾಲಿನ ನಿಜ ದೇವತೆ : ಹರ್ಷಾದ್ ವರ್ಕಾಡಿ
0
ಅಕ್ಟೋಬರ್ 31, 2022