ಕಾಸರಗೋಡು: ಎಡ ಮತ್ತು ಬಲಪಂಥೀಯರ ದೇಶವಿರೋಧಿ ಮೈತ್ರಿಯನ್ನು ಸಮಾಜದ ಮುಂದೆ ಬಯಲಿಗೆಳೆಯಲು ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಕುಂಬಳೆ ಮತ್ತು ಕಾಞಂಗಾಡಿನಲ್ಲಿ ರಾಷ್ಟ್ರ ರಕ್ಷಣಾ ಸಮಾವೇಶ ಆಯೋಜಿಸಲಾಗುವುದು.
ಅ. 21ರಂದು ಕುಂಬಳೆ ಹಾಗೂ 23ರಂದು ಕಾಞಂಗಾಟ್‍ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಕ್ಷದ ರಾಜ್ಯ ಸಮಿತಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. 17ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ಬಿಜೆಪಿ ಜಿಲ್ಲಾ ಸಮಿತಿ ಕಛೇರಿಯಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ದೇಶವಿರೋಧಿ ಶಕ್ತಿಗಳ ಹಸ್ತಕ್ಷೇಪ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಕುಂಬಳೆ, ಕಾಂಜಂಗಾಡಿನಲ್ಲಿ ಬಿಜೆಪಿ ದೇಶ ರಕ್ಷಣಾ ಸಮಾವೇಶ
0
ಅಕ್ಟೋಬರ್ 10, 2022
Tags