ನವ ದೆಹಲಿ: ಆಮ್ ಆದ್ಮಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಸಾಮೂಹಿಕ ಮತಾಂತರ ಕಾರ್ಯಕ್ರಮ ಆಯೋಜಿಸಿ 10 ಸಾವಿರ ಹಿಂದೂಗಳನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.
ಅ.5 ರಂದು ದೆಹಲಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ದಸರಾ ಸಂದರ್ಭದಲ್ಲಿ ಸಾಮೂಹಿಕ ಮತಾಂತರ ಕಾರ್ಯಕ್ರಮ ನಡೆದಿದೆ.
ಮತಾಂತರ ಆಗುವ ಸಂದರ್ಭದಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜೆ ಮಾಡುವುದಿಲ್ಲ ಎಂದು ಮತಾಂತರಗೊಂಡವರಲ್ಲಿ ಪ್ರತಿಜ್ಞೆ ಮಾಡಿಸಲಾಗಿದೆ. ಜತೆಗೆ ಬೌದ್ಧ ಧರ್ಮದಲ್ಲಿ ಪೂರ್ಣ ನಂಬಿಕೆಯನ್ನು ಹೊಂದಬೇಕು ಎಂದು ಸೂಚಿಸಲಾಗಿದೆ.
'ಮಿಷನ್ ಜೈ ಭೀಮ್ ಬೆಂಬಲದೊಂದಿಗೆ, 10,000 ಕ್ಕೂ ಹೆಚ್ಚು ಜನರು ಮತಾಂತರದ ಪ್ರತಿಜ್ಞೆ ಮಾಡಿದ್ದಾರೆ. ಗೌತಮ ಬುದ್ಧನ ನಂಬಿಕೆಗೆ ಮತಾಂತರಗೊಳ್ಳುವ ಮೂಲಕ ಜಾತಿ ಮುಕ್ತ ಮತ್ತು ಅಸ್ಪೃಶ್ಯ ಭಾರತ ನಿರ್ಮಾಣವಾಗುತ್ತಿದೆ' ಎಂದು ಎಎಪಿ ನಾಯಕರೊಬ್ಬರು ಟ್ವೀಟ್ ಮಾಡಿದ್ದಾರೆ.