ಕಾಸರಗೋಡು: ಸ್ಯಾಲರಿ ಚಾಲೆಂಜ್ ಹೆಸರಿನಲ್ಲಿ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಎಡರಂಗ ಸರ್ಕಾರದ ಕ್ರಮದ ವಿರುದ್ಧ ಬ ಸರ್ವೋಚ್ಛ ನ್ಯಾಯಾಲಯದ ತೀರ್ಪು ನೌಕರರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಿದೆ ಎಂದು ಕೇರಳ ಎನ್‍ಜಿಒ ಸಂಘದ ರಾಜ್ಯ ಉಪನಿರ್ದೇಶಕ ಪಿ ಪೀತಾಂಬರನ್ ಹೇಳಿದರು.
ಅವರು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಎನ್‍ಜಿಒ ಸಂಘವು ನಡೆಸಿದ ವೇತನ ಸಂರಕ್ಷಣಾ ದಿನದ ಪ್ರತಿಜ್ಞೆಯ ಅಂಗವಾಗಿ ಕಾಸರಗೋಡು ಸಿವಿಲ್ ಸ್ಟೇಷನ್ ಮುಂಭಾಗದಲ್ಲಿ ನಡೆದ ವೇತನ ಸಂರಕ್ಷಣಾ ದಿನಾಚರಣೆಪ್ರಮಾಣ ವಚನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳ ಎನ್‍ಜಿಒ ಸಂಘವು ನಡೆಸಿರುವ ಕಾನೂನು ಹೋರಾಟದಿಂದ 'ವೇತನವು ನೌಕರರ ಹಕ್ಕು-ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅಧಿಕಾರವಿಲ್ಲ"ಎಂಬ ಮಹತ್ವದ ತೀರ್ಪನ್ನು ನೀಡುವ ಮೂಲಕ ಸುಪ್ರೀಂ ಕೋರ್ಟು ಸರ್ಕಾರದ ಧೋರಣೆಗೆ ತಿರುಗೇಟುನೀಡಿದೆ ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ವಿಜಯನ್ ಸಿ ಪ್ರಮಾಣ ವಚನ ಬೋಧಿಸಿದರು. ಗಂಗಾಧರ, ರಂಜಿತ್ ಕೆ, ರವೀಂದ್ರನ್ ಕೋಟೋಡಿ, ಶಿವ ನಾಯ್ಕ್, ಸಂತೋಷನ್ ವಿ ಕೆ, ಗೋವಿಂದ ನಾಯಕ್, ಮೋಹನನ್ ಕೆ ಕೆ, ಸತೀಶನ್ ಉಪಸ್ಥಿತರಿದ್ದರು.
ಎನ್.ಜಿ.ಒ. ಸಂಘದಿಂದ ವೇತನ ಸಂರಕ್ಷಣಾ ದಿನಾಚರಣೆ
0
ಅಕ್ಟೋಬರ್ 30, 2022
Tags