HEALTH TIPS

ಈ ವರ್ಷ ಕೊರಗ ವಿಭಾಗಕ್ಕೆ ವಿಶೇಷ ಯೋಜನೆಗಳು


      ಬದಿಯಡ್ಕ: ಜಿಲ್ಲೆಯ ಕೊರಗ ವಿಭಾಗಕ್ಕೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ರೂಪಿಸಿರುವ ಯೋಜನೆಗಳು ಈ ವರ್ಷದಿಂದ ಆರಂಭವಾಗಲಿವೆ. ಒಂದು ವರ್ಷದೊಳಗೆ ಕಾಲೋನಿಗಳಲ್ಲಿ ಬದಲಾವಣೆ ತರಲು ಇಲಾಖೆ ಯೋಜನೆ ರೂಪಿಸಿದೆ. ಈ ಹಿಂದೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಕೊರಗ ಕಾಲೋನಿಗೆ ಖುದ್ದು ಭೇಟಿ ನೀಡಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಅನುμÁ್ಠನಗೊಳಿಸುವಂತೆ ವಿವಿಧ ಇಲಾಖೆಗಳಿಗೆ ಸೂಚಿಸಿದ್ದರು. ಇದರ ಆಧಾರದ ಮೇಲೆ ಕೊರಗ ಕಾಲೋನಿಗಳಲ್ಲಿ ಅನುμÁ್ಠನಗೊಳ್ಳುವ ಅಭಿವೃದ್ಧಿ ಯೋಜನೆಗಳ ಸಮಗ್ರ ದಾಖಲೆ ತಯಾರಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ತಿಳಿಸಿರುವರು. ಮುಂದಿನ ಜಿಲ್ಲಾ ಮಟ್ಟದ ಕಾರ್ಯಕಾರಿಣಿಯಲ್ಲಿ ಯೋಜನೆಗಳ ಕುರಿತು ಚರ್ಚಿಸಿ ಕೂಡಲೇ ಅನುμÁ್ಠನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದಿರುವರು.
          154 ಕುಟುಂಬಗಳ ಮನೆ ದುರಸ್ತಿಯಾಗಲಿವೆ. ಇದನ್ನು ಪರಿಶೀಲಿಸಲು ಆರು ಮಾನ್ಯತೆ ಪಡೆದ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಲೈಫ್ ಮಿಷನ್ ನಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿರುವವರ ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಪಂಚಾಯಿತಿ ಮಟ್ಟದಲ್ಲಿ ಆಡಳಿತ ಮಂಡಳಿ ಅರ್ಜಿಯನ್ನು ಪರಿಗಣಿಸಲಿದೆ. ಏಳು ಕುಟುಂಬಗಳ ಮನೆಗಳಿಗೆ ಶೀಘ್ರವೇ ವಿದ್ಯುತ್ ದುರಸ್ತಿಯಾಗಲಿದೆ. ಇದಕ್ಕಾಗಿ ಅಂದಾಜು ಪಟ್ಟಿ ತಯಾರಿಸಲಾಗುವುದು. ಅಸಾಪ್, ಎನ್‍ಟಿಟಿಎಫ್ ಅಕಾಡೆಮಿ ಆಫ್ ಮೀಡಿಯಾ ಮತ್ತು ಡಿಸೈನ್ ಮತ್ತು ವೆಳ್ಳಿಕ್ಕೋತ್ ರೂರಲ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಕೊರಗ ವಿಭಾಗದಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡಲಿದೆ.
          ಈ ಯೋಜನೆಯಿಂದ ಕಾಲೋನಿಗಳಿಗೆ ಕುಡಿಯುವ ನೀರು ಸೌಲಭ್ಯ ಲಭಿಸಲಿದೆ. ಯೋಜನೆಗಳನ್ನು ಅನುμÁ್ಠನಗೊಳಿಸಲು ಆದಿಯಾ ಪನಿಯಾ ಪ್ಯಾಕೇಜ್ ಮತ್ತು ಸಿಸಿಡಿ (ಸಂರಕ್ಷಣಾ ಕಮ್ ಅಭಿವೃದ್ಧಿ) ಯಿಂದ ಹಣವನ್ನು ವಿನಿಯೋಗಿಸಲಾಗುತ್ತದೆ. ರಾಜ್ಯದಲ್ಲಿ ಕೊರಗ ವಿಭಾಗ ಹೊಂದಿರುವ ಏಕೈಕ ಜಿಲ್ಲೆ ಕಾಸರಗೋಡು. ಪ್ರಸ್ತುತ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ 585 ಕೊರಗ ಕುಟುಂಬಗಳು ವಾಸಿಸುತ್ತಿವೆ. ಪೆರಡಾಲದ ಕೊರಗ ಕಾಲೋನಿಯಲ್ಲಿಯೇ 46 ಕುಟುಂಬಗಳಿವೆ.
               ಕೊರಗ ಪರಿಶಿಷ್ಟ ಜಾತಿ ಸಮಾಜಕ್ಕೆ ಹೊಸ ಬದುಕು
        ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ಮಾಹಿತಿ ನೀಡಿ, ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಬದಿಯಡ್ಕ ಕೊರಗ ಪರಿಶಿಷ್ಟ ಪಂಗಡ ಸಮಾಜದ ಪುನರುಜ್ಜೀವನವನ್ನು ಯೋಜನೆಯ ಅಂಗವಾಗಿ ಜಾರಿಗೊಳಿಸಲಾಗುವುದು. ಕೊರಗ ಭಾಗದ ಸಾಂಪ್ರದಾಯಿಕ ಉತ್ಪನ್ನಗಳನ್ನು ಸೊಸೈಟಿ ಮೂಲಕ ಮಾರಾಟ ಮಾಡಿ ಆದಾಯ ಗಳಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಪ್ರಸ್ತುತ ಸಮಾಜದ ನಿವೇಶನವನ್ನು ಅಳತೆ ಮಾಡಿ ಗುರುತಿಸಲಾಗುವುದು. ನಂತರ ಕಟ್ಟಡವನ್ನು ನವೀಕರಿಸಲಾಗುವುದು. ಸಮಾಜದ ಚಟುವಟಿಕೆಗಳ ಮೇಲೆ ನಿಗಾ ಇಡಲು ವಿಶೇಷ ಸಮಿತಿಯನ್ನೂ ರಚಿಸಲಾಗುವುದು ಎಂದಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries