HEALTH TIPS

ಎಂಡೋ ಸಂತ್ರಸ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ: ಶಾಸಕ ಸಿ.ಎಚ್ ಕುಞಂಬು ಮನೆ ಎದುರು ಯುವ ಕಾಂಗ್ರೆಸ್ ಧರಣಿ

 



          ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರನ್ನು ಅವಮಾನಿಸುವ ರೀತಿಯ ಹೇಳಿಕೆ ನೀಡಿದ ಉದುಮ ಶಾಸಕ ಸಿ.ಎಚ್ ಕುಞಂಬು ಅವರ  ವಿರುದ್ಧ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿತು.  
          ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸೆಕ್ರೆಟರಿಯೇಟ್ ಎದುರು ಕಳೆದ ಹಲವು ದಿವಸಗಳಿಂದ ಸಾಮಾಝಿಕ ಕಾರ್ಯಕರ್ತೆ ದಯಾಬಾಯಿ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರನ್ನು ಅವಮಾನಿಸಿದ ಶಾಸಕ ಸಿ.ಎಚ್ ಕುಞಂಬು ಅವರ ಜನವಿರೋಧಿ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು. ಎಂಡೋಸಲ್ಫಾನ್ ಸಂತ್ರಸ್ತರ ವಿರುದ್ಧ ಹಗುರವಾಗಿ ಮಾತನಾಡುವ ಶಾಸಕರು, ಇಲ್ಲಿ ಎಂಡೋಸಂತ್ರಸ್ತರು ಅನುಭವಿಸುತ್ತಿರುವ  ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ಮುಂದಾಗದಿರುವುದು ಖಂಡನೀಯ. ಜಿಲ್ಲೆಯ ಆರೋಗ್ಯ ಸಮಸ್ಯೆ ಪರಿಹರಿಸಲಾಗದ ಸಚಿವರು ಎಂಡೋಸಂತ್ರಸ್ತರಿಗೆ ಅವಮಾನಿಸುವುದನ್ನು ಕೊನೆಗೊಳಿಸಬೇಕು ಎಂದು ತಿಳಿಸಿದರು. ಕಾಸರಗೋಡು ಟೌನ್ ಸಿಐ ಅಜಿತ್ ನೇತೃತ್ವದ ಪೊಲೀಸರ ತಂಡ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದಿದೆ.
ಯೂತ್ ಕಾಂಗ್ರೆಸ್ ಜಿಲ್ಲಾ ಪದಾಧಿಕಾರಿಗಳಾದ ರತೀಶ್ ಕಟ್ಟುಮಾಡಂ, ಕಾರ್ತಿಕೇಯನ್ ಪೆರಿಯ,  ರಫಿ ಅಡೂರು, ರಾಜಿಕಾ ಉದಯ ಮಂಗಲಂ, ಚಂದ್ರಹಾಸ ಭಟ್, ಅಹ್ಮದ್ ಚೇರೂರುಮುಂತಾದವರು ಧರಣಿಯ ನೇತೃತ್ವ ವಹಿಸಿದ್ದರು.
                   ಯುವ ಮೋರ್ಚಾ ಖಂಡನೆ:
ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಅವರು ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ ಹೋರಾಟವನ್ನು ಲೇವಡಿ ಮಾಡುವ ಮೂಲಕ ಉದುಮ ಶಾಸಕ ಸಿ.ಎಚ್. ಕುಞಂಬು ಅವರ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದು ಸಾಬೀತಾಗಿರುವುದಾಗಿ ಯುವಮೋರ್ಚಾ ತಿಳಿಸಿದೆ.  'ಎಷ್ಟೇ ಹಣ ಬಂದರೂ ಕೆಲವರಿಗೆ ಸಾಲದು'ಎಂಬುದಾಗಿ ಎಂಡೋ ಸಂತ್ರಸ್ತರನ್ನು ಉದ್ದೇಶಿಸಿ ಶಾಸಕ ಸಿ.ಎಚ್ ಕುಞಂಬು ನೀಡಿರುವ ಹೇಳಿಕೆ ಅತ್ಯಂತ ಬಾಲಿಶವಾದುದು. ಇಂತಹ ಮಾತು ಸಂಕಷ್ಟಗಳ ಸರಮಾಲೆಯಿಂದ ನರಳುತ್ತಿರುವ ಎಂಡೋಸಲ್ಫಾನ್ ಪೀಡಿತರ ಕುಟುಂಬಗಳಿಗೆ ಹೆಚ್ಚಿನ ವೇದನೆ ತಂದೊಡ್ಡಿದೆ. ಎಂಡೋಲ್ಫಾನ್ ಸಂತ್ರಸ್ತರ ಬಗ್ಗೆ ಪಿಣರಾಯಿ ಸರ್ಕಾರಕ್ಕಿರುವ ಧೋರಣೆಯನ್ನು ಶಾಸಕ ಸಿ.ಎಚ್.ಕುಂಜಂಬು ಅವರ ಮಾತು ಸ್ಪಷ್ಟಪಡಿಸುತ್ತದೆ.
ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ ಎಂಬ ಹೇಳಿಕೆ ಸಂಪೂರ್ಣ ಹಾಸ್ಯಾಸ್ಪದವಾಗಿದೆ. 2016ರಿಂದ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಪಕ್ಷ ಆಡಳಿತ ನಡೆಸುತ್ತಿದೆ. ಅಧಿಕಾರಕ್ಕೆ ಬಂದು 6 ವರ್ಷವಾದರೂ ವೈದ್ಯಕೀಯ ಕಾಲೇಜು ಕಾಮಗಾರಿ ಪೂರ್ತಿಗೊಳಿಸಲಾಗದೆ ಪೊಳ್ಳು ಭರವಸೆ ಮೂಲಕ ಎಂಡೋ ಸಂತ್ರಸ್ತರನ್ನು ವಂಚಿಸುತ್ತಿದೆ.
               ರಾಜ್ಯದ ಸಚಿವರುಗಳಿಗೆ ಎಂಡೋಸಲ್ಫಾನ್ ರೋಗಿಗಳ ದುಃಖ, ನೋವು ಮತ್ತು ಕಷ್ಟಗಳು ಅರ್ಥವಾಗುತ್ತಿಲ್ಲ. ಜನವಿರೋಧಿ ನೀತಿ ಮುಂದುವರಿದರೆ ಕೇರಳದ ಕಮ್ಯುನಿಸ್ಟ್ ಪಕ್ಷವೂ ಬಂಗಾಳ ಘಟಕದ ಭವಿಷ್ಯವನ್ನು ಎದುರಿಸಲಿದೆ ಎಂದು ಯುವಮೋರ್ಚಾ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries