ಬೊಜ್ಜು ತುಂಬಿರುವ ಹೊಟ್ಟೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಹೊಟ್ಟೆ ಬೊಜ್ಜು ಸಾಮಾನ್ಯ ಆಹಾರ ಪದ್ದತಿ, ಜೀವನ ಪದ್ದತಿ, ವ್ಯಾಯಾಮ ಇಲ್ಲದೆ ಇರುವುದರಿಂದ ಈ ರೀತಿಯ ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತಿದೆ.
ಅದರಲ್ಲೂ ಲಾಕ್ ಡೌನ್ ವೇಳೆ ಸುಮ್ಮನೆ ಕೂತು ಅನೇಕರು ಹೊಟ್ಟೆ ಬೆಳೆಸಿಕೊಂಡಿದ್ದಾರೆ. ಅನೇಕರಿಗೆ ಈ ಹೊಟ್ಟೆಯಿಂದ ಮುಕ್ತಿ ಪಡೆದುಕೊಳ್ಳಬೇಕು ಎನ್ನುವ ಆಸೆ ಇರುತ್ತೆ. ಅದಕ್ಕೆ ನೀವು ಮೊದಲು ಮಾಡಬೇಕಾದ ಕೆಲಸ ಬೊಜ್ಜು ಬರುವ ವಸ್ತುಗಳ ಸೇವನೆಯಿಂದ ದೂರ ಉಳಿಯುವುದು ಮತ್ತು ಕ್ಯಾಲೋರಿ ಯುಕ್ತ ಆಹಾರವನ್ನು ಕಡಿಮೆ ಸೇವಿಸುವುದು ಆಗಿದೆ.
ಅದರ ಜೊತೆಗೆ ಸರಿಯಾಗಿ ವ್ಯಾಯಾಮ ಕೂಡ ಮಾಡಬೇಕಾಗುತ್ತದೆ. ಇದಷ್ಟೇ ಅಲ್ಲ ಉತ್ತಮ ನಿದ್ರೆಯಿಂದಲೂ ಬೆಲ್ಲಿ ಫ್ಯಾಟ್ ಅನ್ನು ಕರಗಿಸಬಹುದಾಗಿದೆ. ಹೌದು, ಉತ್ತಮ ನಿದ್ರೆ ಮೂಲಕ ನಿಮ್ಮ ದೇಹಕ್ಕೆ ರೆಸ್ಟ್ ಸಿಗುತ್ತದೆ ಈ ಮೂಲಕ ನೀವು ಬೊಜ್ಜು ತುಂಬಿದ ಹೊಟ್ಟೆಯನ್ನು ಕರಗಿಸಬಹುದು. ಯಸ್, ದೇಹಕ್ಕೆ ಉತ್ತಮ ನಿದ್ದೆ ಮತ್ತು ಉತ್ತಮ ರೆಸ್ಟ್ ಸಿಗದಿದ್ದರೆ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಜಾಸ್ತಿಯಾಗುತ್ತದೆ.
ನಿಮ್ಮ ಕೋಣೆಯನ್ನು ಕತ್ತಲೆಯಾಗಿಸಿ!
ದೇಹದ ತೂಕ ಮತ್ತು ನಿದ್ದೆಗೆ ಅವಿನಾಭವ ಸಂಬಂಧವಿದೆ. ಹೌದು, ಉತ್ತಮ ನಿದ್ದೆಯು ನಿಮ್ಮ ತೂಕವನ್ನು ಅಥವಾ ಕೊಬ್ಬಿನಾಂಶವನ್ನು ಕಡಿಮೆಗೊಳಿಸುತ್ತದೆ. ಹೌದು, ಹೀಗಾಗಿ ಉತ್ತಮ ನಿದ್ದೆಗಾಗಿ ನೀವು ನಿಮ್ಮ ಕೋಣೆಯನ್ನು ಕತ್ತಲಾಗಿಸಬೇಕು. ಕತ್ತಲಾಗಿಸುವುದು ಎಂದರೆ ಕೇವಲ ಲೈಟ್ ಆಫ್ ಮಾಡಿ ಕೋಣೆಯನ್ನು ಕತ್ತಲಾಗಿಸುವುದು ಅಲ್ಲ. ಕರ್ಟನ್ ಗಳನ್ನು ಹಾಕಿ ಹೊರಗಿನಿಂದ ಯಾವುದೇ ರೀತಿಯ ಬೆಳಕು ಬರದಂತೆ ಕತ್ತಲಾಗಿಸಬೇಕು. ಈ ರೀತಿ ಮಾಡಿದರೆ ನಿಮನ್ನು ತೀವ್ರ ನಿದ್ದೆಗೆ ಕರೆದುಕೊಂಡು ಹೋಗುವ ಮೆಲಟೊನಿನ್ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದೊಂದು ನಿದ್ದೆ ಬರಿಸುವ ಹಾರ್ಮೋನ್ ಆಗಿದೆ. ಇನ್ನು ನಿಮ್ಮ ಕೋಣೆಯಲ್ಲಿ ಬೆಳಕು ಇದ್ದರೆ ದೇಹವು ಮೆಲಟೊನಿನ್ ಉತ್ಪಾದನೆಗೆ ತೊಡಕು ಉಂಟಾಗುತ್ತದೆ. ಇನ್ನು ಈ ಮೆಲಟೊನಿನ್ ನಿಮ್ಮ ದೇಹದಲ್ಲಿ ಮೆಟಬಾಲಿಸಂ ಉತ್ಪಾದನೆಗೂ ಸಹಾಯ ಮಾಡುತ್ತದೆ. ಅಂದರೆ ಇವುಗಳು ಬ್ರೌನ್ ಫ್ಯಾಟನ್ನು ವೈಟ್ ಫ್ಯಾಟ್ ಅಂದರೆ ಕೆಟ್ಟ ಕೊಬ್ಬನ್ನು ಒಳ್ಳೆ ಕೊಬ್ಬಾಗಿ ಪರಿವರ್ತಿಸುತ್ತದೆ.
ಬೇಗ ನಿದ್ದೆ ಮಾಡಿ!
ನೀವು ಡೀಪ್ ನಿದ್ದೆಗೆ ಜಾರಿದರೆ ನಿಮ್ಮ ದೇಹವು ನಿಮ್ಮಲ್ಲಿರುವ ಕ್ಯಾಲೋರಿಗಳನ್ನು ಕರಗಿಸುವ ಕೆಲಸ ಮಾಡುತ್ತದೆ. ಹೀಗಾಗಿ ಬೇಗ ಮಲಗಿದರೆ ಉತ್ತಮ ನಿದ್ದೆಗೆ ಜಾರಿ ದೀರ್ಘಕಾಲ ನಿದ್ದೆ ಮಾಡಬಹುದು. ಸರಿಯಾದ ಸಮಯಕ್ಕೆ ಸರಿಯಾದ ನಿದ್ದೆ ಆದರೆ ನಿಮ್ಮ ದೇಹದಲ್ಲಿರುವ ಕೊಬ್ಬನ್ನು ದೇಹವೇ ಕಡಿಮೆಗೊಳಿಸುತ್ತದೆ. ಇದು ಯಾಕೆ ಆಗುತ್ತದೆ ಎಂದರೆ ನೀವು ಡೀಪ್ ನಿದ್ದೆಗೆ ಜಾರಿದಾಗ ನಿಮ್ಮ ಮೆದುಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಇನ್ನು ಮೆದುಳು ಕೆಲಸ ಮಾಡಲು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಶಕ್ತಿಗಾಗಿ ದೇಹದಲ್ಲಿರುವ ಗ್ಲೂಕೋಶ್ ಅಂಶ ಬೇಕು. ಹೀಗೆ ಒಂದಕ್ಕೊಂದು ಹೊಂದಾಣಿಕೆ ಮಾಡಿಕೊಂಡು ದೇಹದಲ್ಲಿರುವ ಕೊಬ್ಬನ್ನು ಕರಗಿಸುವ ಕೆಲಸವನ್ನು ಮಾಡುತ್ತದೆ.
ವಾತಾವರಣ ತಂಪಾಗಿರಲಿ!
ನಿದ್ದೆ, ಕೂಲ್ ವಾತಾವರಣ, ಕೊಬ್ಬು ಕರಗುವುದಕ್ಕೆ ಸಂಬಂಧವಿದೆ. ಹೌದು, ನಮ್ಮ ದೇಹದಲ್ಲಿರುವ ಬ್ರೌನ್ ಫ್ಯಾಟ್ ನಿದ್ದೆಯ ಸಮಯದಲ್ಲಿ ನಮ್ಮ ದೇಹವನ್ನು ವಿವಿಧ ವಾತಾವರಣಕ್ಕೆ ಒಗ್ಗಿಗೊಳಿಸುವ ಕೆಲಸ ಮಾಡುತ್ತದೆ. ಪ್ರಮುಖವಾಗಿ ಇದು ತಂಪಾದ ವಾತಾವರಣೆಕ್ಕೆ ಒಗ್ಗಿಕೊಳ್ಳುತ್ತದೆ. ಹೀಗಾಗಿ ಇದು ತಂಪಾದ ವಾತಾವರಣದಲ್ಲಿ ಹೆಚ್ಚು ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಈ ಬ್ರೌನ್ ಫ್ಯಾಟ್ ನಿಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವ ಕೆಲಸ ಮಾಡುತ್ತದೆ.ಹೀಗಾಗಿ ಮಲಗುವ ವೇಳೆ ಫ್ಯಾನ್ , ಕೂಲರ್ ಅಥವಾ ಎಸಿ ಹಾಕಿ ಮಲಗಬಹುದು.
ಮಲಗುವ ಮುನ್ನ ಗ್ರೀನ್ ಟೀ ಕುಡಿಯಿರಿ!
ನಿದ್ದೆಗೆ ಸಂಬಂಧಪಟ್ಟ ಟೀಯಾಗಿದೆ ಗ್ರೀನ್ ಟೀ. ಹೌದು, ನಿದ್ದೆಗೂ ಮುನ್ನ ನೀವು ಗ್ರೀನ್ ಟೀ ಕುಡಿದರೆ ಇದು ನಿಮ್ಮ ದೇಹದಲ್ಲಿರುವ ಕ್ಯಾಲೋರಿಯನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕೆಫೇನ್, ಗ್ರೀನ್ ಟೀ ಕಂಟೆಂಟ್ ಗಳು ಮೆಟಬಾಲಿಸಂ ಅನ್ನು ವೃದ್ದಿಸುತ್ತದೆ. ಇವುಗಳು ನಿಮ್ಮ ತೂಕ ಅಥವಾ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.
ಫೋನ್ ಆಫ್ ಮಾಡಿ!
ಮಲಗುವ ಮುನ್ನ ನೀವು ಫೋನ್ ಬಳಕೆಯನ್ನು ಕಡಿಮೆ ಮಾಡಿದರೆ ಉತ್ತಮ ನಿದ್ದೆಗೆ ಜಾರಬಹುದು. ಹೌದು, ಮೊಬೈಲ್ ನೋಡಿ ಮಲಗಿದರೆ ನಿಮಗೆ ನಿದ್ದೆಗೆ ಬೇಗನೆ ಹತ್ತುವುದಿಲ್ಲ. ಯಾಕೆಂದರೆ ಮೊಬೈಲ್ ನಲ್ಲಿ ಬರುವ ನೀಲಿ ವಿಕಿರಣಗಳು ಮೆಲಟೊನಿನ್ ಉತ್ಪಾದನೆಗೆ ತೊಡಕು ಉಂಟು ಮಾಡುತ್ತದೆ. ಇನ್ನು ನೀವು ಮಲಗಿದ ಮೇಲೆ ಫೋನ್ ಆಫ್ ಮಾಡಿದರೆ ಉತ್ತಮ ಯಾಕೆಂದರೆ ನಿದ್ದೆಯ ವೇಳೆ ಕಾಲ್ ಬಂದರೆ ಅಥವಾ ಮೆಸೇಜ್ ಬಂದರೆ ತಟ್ಟನೆ ನೀವು ಎಚ್ಚರಗೊಳ್ಳುತ್ತೀರಿ. ಹೀಗಾಗಿ ಫೋನ್ ಆಫ್ ಮಾಡಿದರೆ ನಿದ್ರೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಹೀಗಾಗಿ ಉತ್ತಮ ನಿದ್ದೆಗೆ ಫೋನ್ ಬಳಕೆ ದೂರವಿರಲಿ. ಈ ಮೂಲಕ ನೀವು ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.