ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಮೃತರಾದ ಯೋಧ ಕೆ.ವಿ. ಅಶ್ವಿನ್ ಅವರ ಪಾರ್ಥಿವ ಶರೀರವನ್ನು ಅಧಿಕೃತ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಹುಟ್ಟೂರಾದ ಚೆರುವತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ತರಲಾಗಿದ್ದ ಪಾರ್ಥಿವ ಶರೀರವನ್ನು ಕೊನೆಯ ಬಾರಿಗೆ ನೋಡಲು ನೂರಾರು ಮಂದಿ ಆಗಮಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಸಚಿವ ಅಹ್ಮದ್ ದೇವರ್ ಕೋವಿಲ್ ಮತ್ತು ಮುಖ್ಯಮಂತ್ರಿ ಪರವಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಂತಿಮ ನಮನ ಸಲ್ಲಿಸಿದರು.
ವಾಚನಾಲಯದಲ್ಲಿ ಸಾರ್ವಜನಿಕ ದರ್ಶನದ ನಂತರ ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಪೋಲೀಸ್ ಮತ್ತು ಸೇನೆಯಿಂದ ಅಧಿಕೃತ ಗೌರವಗಳೊಂದಿಗೆ ನಮನ ಸಲ್ಲಿಸಲಾಯಿತು. ಅಶ್ವಿನ್ ಸಹೋದರಿಯ ಮಕ್ಕಳಾದ ಅತುಲ್ ಮತ್ತು ಚಿಯಾನ್ ಅವರು ಚಿತೆಗೆ ಬೆಂಕಿ ಹಚ್ಚಿದರು.
ಮೃತದೇಹವನ್ನು ನಿನ್ನೆ ತಡರಾತ್ರಿ ಕಣ್ಣೂರಿಗೆ ತರಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಗೌರವಾಧಾರಗಳೊಂದಿಗೆ ಚೆರುವತ್ತೂರಿಗೆ ತರಲಾಯಿತು. ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ಯೆಶೋ ನಾಯಕ್ ಚೆರುವತ್ತೂರಿನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ದೇಶಕ್ಕಾಗಿ ಮಾಡಿದ ಧೀಮಂತ ಸೇವೆಯ ಹಾದಿಯಲ್ಲಿ ಪ್ರಾಣ ಕಳೆದುಕೊಂಡ ಅಶ್ವಿನ್ ಅವರ ಸೇವೆಯನ್ನು ದೇಶ ಮತ್ತು ಕೇಂದ್ರ ಸರ್ಕಾರ ಸದಾ ಸ್ಮರಿಸುತ್ತದೆ ಎಂದರು.
ಸಕಲ ಗೌರವಾಧಾರಗಳೊಂದಿಗೆ ಅಶ್ವಿನ್ ಗೆ ವಿದಾಯ
0
ಅಕ್ಟೋಬರ್ 24, 2022