'ಕರಾವಳಿ ಅಭಿವೃದ್ಧಿ ಬಗ್ಗೆ ಅರಿವು' ಯೋಜನೆಯ ಅಂಗವಾಗಿ ಮೀನುಗಾರಿಕಾ ಇಲಾಖೆ ವತಿಯಿಂದ ಮೀನುಗಾರರಿಗೆ ಜಾಗೃತಿ ತರಗತಿ ನಡೆಸಲಾಯಿತು. ಪಾಂಡ್ಯಾಲವಲಪ್ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ನಡೆದ ಕಾರ್ಯಕ್ರಮವನ್ನು ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಕೆ.ಮನೋಹರನ್, ಪಂಚಾಯಿತಿ ಸದಸ್ಯರಾದ ಪಿ.ಕೆ.ಸುಮತಿ, ವಿ.ಮಧು ಉಪಸ್ಥಿತರಿದ್ದರು.
ಕಣ್ಣೂರು ಮೀನುಗಾರಿಕೆ ಸಹಾಯಕ ರಿಜಿಸ್ಟ್ರಾರ್ ಸಿ.ಪಿ.ಭಾಸ್ಕರನ್, ಅಯಿತ್ತಲ ಕರಾವಳಿ ಪೆÇಲೀಸ್ ಠಾಣೆ ಎಎಸ್‍ಐ ಸಂತೋಷ್, ನೀಲೇಶ್ವರ ಅಬಕಾರಿ ಪ್ರಿವೆಂಟಿವ್ ಆಫೀಸರ್ ನಾರಾಯಣನ್ ಮತ್ತು ಕಣ್ಣೂರು ಮೀನುಗಾರಿಕಾ ಠಾಣೆ ಸಹಾಯಕ ಮೀನುಗಾರಿಕಾ ವಿಸ್ತರಣಾಧಿಕಾರಿ ಅನೀಶ್ ಕುಮಾರ್ ತರಗತಿ ನಡೆಸಿದರು. ತ್ರಿಕರಿಪುರ ಮತ್ಸ್ಯ ಭವನದ ವಿಸ್ತರಣಾಧಿಕಾರಿ ಎಂ.ಎಫ್.ಪಾಲ್ ಸ್ವಾಗತಿಸಿದರು. ಪವಿತ್ರನ್ ವಂದಿಸಿದರು.
'ಕರಾವಳಿ ಅಭಿವೃದ್ಧಿ ಬಗ್ಗೆ ಅರಿವು' ಯೋಜನೆ: ಜಾಗೃತಿ ಕಾರ್ಯಕ್ರಮ
0
ಅಕ್ಟೋಬರ್ 05, 2022