ಕಾಸರಗೋಡು: ಕಳವು ನಡೆಸಿದ ಯುವಕನನ್ನು ಸ್ಥಳೀಯರು ಹಿಂಬಾಲಿಸಿದಾಗ ಕಳವು ನಡೆಸಿದ ಯುವಕ ಟ್ರಾನ್ಸ್‍ಫಾರ್ಮರ್‍ಗೆ ನುಗ್ಗಿದ ಘಟನೆ ನಡೆದಿದೆ. ಯುವಕ ವಿದ್ಯುತ್ ತಂತಿಯ ಮೇಲೆ ನಡೆದುಕೊಂಡು ಭಯವನ್ನು ಹರಡಿದ್ದು, ಕ್ಷಣದಲ್ಲಿ ಸ್ಥಳೀಯರು ಮತ್ತು ರಕ್ಷಣಾ ಕಾರ್ಯಕರ್ತರು ನೆರೆದರು. ಕೊನೆಗೆ ಯುವಕನ ಮನವೊಲಿಸಿ ಕೆಳಗೆ ಇಳಿಸಲಾಯಿತು. ಬಿಹಾರ ಮೂಲದ ಮುರಾರಿ (25) ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಾವುಂಗಾಲ್ ಪೈರತುಕ್ಕಂ ಕೊಳದ ಬಳಿ ಟ್ರಾನ್ಸ್‍ಫಾರ್ಮರ್‍ಗೆ ಹತ್ತಿ ಗಾಬರಿಗೊಳಿಸುವಂತೆ ಜನರನ್ನು ಒಂದು ಗಂಟೆ ನಿಲ್ಲಿಸಿದ ಭೂಪ.
ಮಾವುಂಗಾಲ್‍ನಲ್ಲಿ ಯುವತಿಯ ಸರ ಅಪಹರಿಸಿದ ಯುವಕನನ್ನು ಸ್ಥಳೀಯರು ಬೆನ್ನಟ್ಟಿದ್ದರು. ಸ್ಥಳೀಯರು ಹಿಂಬಾಲಿಸುತ್ತಿರುವುದನ್ನು ತಿಳಿದ ಯುವಕ ತಪ್ಪಿಸಿಕೊಳ್ಳಲು ಟ್ರಾನ್ಸ್ ಫಾರ್ಮರ್ ಗೆ ನುಗ್ಗಿದ. ಯುವಕ ಟ್ರಾನ್ಸ್‍ಫಾರ್ಮರ್‍ಗೆ ಹತ್ತಿದ ನಂತರ ಸ್ಥಳೀಯರು ಕೆಎಸ್‍ಇಬಿಗೆ ಮಾಹಿತಿ ನೀಡಿದ್ದಾರೆ. ನಂತರ ಅಧಿಕಾರಿಗಳು ಆಗಮಿಸಿ ಟ್ರಾನ್ಸ್ ಫಾರ್ಮರ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಸ್ಥಳೀಯರು ಯುವಕನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದರು, ಆದರೆ ಯುವಕ ಟ್ರಾನ್ಸ್‍ಫಾರ್ಮರ್ ಮೂಲಕ ವಿದ್ಯುತ್ ತಂತಿಯನ್ನೂ ದಾಟಿದ್ದಾನೆ. ಕಾಞಂಗಾಡ್ ಅಗ್ನಿಶಾಮಕ ಠಾಣಾಧಿಕಾರಿ ಪಿ.ಪವಿತ್ರನ್ ನೇತೃತ್ವದಲ್ಲಿ ಪೋಲೀಸರು ಮತ್ತು ಅಗ್ನಿಶಾಮಕ ದಳದ ಸದಸ್ಯರು ಏಣಿಯನ್ನು ಕೆಳಗಿಳಿಸಲು ಪ್ರಯತ್ನಿಸಿದರು. ರಕ್ಷಣಾ ಸಿಬ್ಬಂದಿ ಏಣಿ ಹತ್ತುತ್ತಿದ್ದ ವೇಳೆ ಯುವಕ ವಿದ್ಯುತ್ ತಂತಿ ಹಿಡಿದುಕೊಂಡು ನಡೆಯುತ್ತಿದ್ದ. ಯುವಕ ನಡೆಯುವಾಗ ನೆಗೆದು ಬೀಳದಂತೆ ಸಿವಿಲ್ ಡಿಫೆನ್ಸ್‍ನ ಸದಸ್ಯರು ಸಹ ಕೆಳಗೆ ನಿಂತಿದ್ದರು.
ಕೊನೆಗೆ ಒಂದು ಗಂಟೆಯ ಅದ್ವಾನದ ಬಳಿಕ ಯುವಕನನ್ನು ಕೆಳಗೆ ಇಳಿಸಲಾಯಿತು. ಬಳಿಕ ನಡೆದ ವಿಸ್ತೃತ ತನಿಖೆಯಲ್ಲಿ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಸ್ನೇಹಾಲಯದಿಂದ ಓಡಿಬಂದಿರುವುದು ಪತ್ತೆಯಾಗಿದೆ. ಈ ಹಿಂದೆ, ಇದೇ ರೀತಿಯ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಚಂದೆರಾದಲ್ಲಿ ಯುವಕನನ್ನು ಬಂಧಿಸಿದ್ದರು. ಬಳಿಕ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದನ್ನು ಮನಗಂಡ ಪೋಲೀಸರು ಸ್ನೇಹಾಲಯಕ್ಕೆ ವರ್ಗಾಯಿಸಿದ್ದರು. ಶನಿವಾರ ಬೆಳಗ್ಗೆ ಅಲ್ಲಿಂದ ತಪ್ಪಿಸಿಕೊಂಡು ಮಾವುಂಗಾಲ್ ತಲುಪಿದ್ದ. ಸರ ಎಗರಿಸಿದ ಬಗ್ಗೆ ದೂರು ಬಂದಿಲ್ಲದ ಕಾರಣ ಯುವಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೊಸದುರ್ಗ ಪೋಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಯುವಕನನ್ನು ಸ್ನೇಹಾಲಯಕ್ಕೆ ವಾಪಸ್ ಕರೆದೊಯ್ಯಲಾಯಿತು.
ಕಳವು ನಡೆಸಿದ ಯುವಕನಿಂದ ಅವಾಂತರ ಸೃಷ್ಟಿ: ಟ್ರಾನ್ಸ್‍ಫಾರ್ಮರ್‍ಗೆ ನುಗ್ಗಿ ವಿದ್ಯುತ್ ತಂತಿಯುದ್ದಕ್ಕೂ ಸಾಹಸ: ಮಾವುಂಗಾಲಲ್ಲಿ ಘಟನೆ
0
ಅಕ್ಟೋಬರ್ 29, 2022