ಕುಂಬಳೆ: ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಪ್ರತಿಯೋರ್ವರಿಗೂ ಉತ್ತಮ ಆರೋಗ್ಯ ಅತೀಮುಖ್ಯ. ಆರೋಗ್ಯದ ಬಗೆಗಿನ ಕಾಳಜಿ ಸದಾ ಅವಶ್ಯಕ ಎಂದು ಕುಂಬಳೆ ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದ ಸಂಚಾಲಕ ಶೇಂತಾರು ನಾರಾಯಣ ಭಟ್ ಹೇಳಿದರು.
ಶಾಲೆಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಉಧ್ಘಾಟಿಸಿ ಅವರು ಮಾತನಾಡಿದÀರು.
ಕಾರ್ಯಕ್ರಮದಲ್ಲಿ ಹರಿದಾಸ್ ವೈದ್ಯರ್ಸ್ ಆಯುμÁ್ಕಮಿಯ ಆಯುರ್ವೇದ ವೈದ್ಯರಾದ ಡಾ.ಮಿಥುನ್ ಚಕ್ರವರ್ತಿ ಟಿ ಹೆಚ್. ಮತ್ತು ಡಾ.ರಶ್ಮಿ ಕೆ.ಆರ್. ಆರೋಗ್ಯ ತಪಾಸಣೆ ನಡೆಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷÀ ಯತೀಶ್.ಕೆ ಉಪಸ್ಥಿತರಿದ್ದರು. ವೈದ್ಯರನ್ನು ಶಾಲೆಯ ಪರವಾಗಿ ಶಾಲುಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ಕು.ತೇಜಸ್ವಿನಿ ಕೆ ಸ್ವಾಗತಿಸಿ, ವಂದಿಸಿದರು.