ತ್ರಿಶೂರ್: ಪಾಪ್ಯುಲರ್ ಫ್ರಂಟ್ ಜೊತೆ ಸಂಬಂಧ ಹೊಂದಿರುವ ಪೆÇಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ನಿನ್ನೆ ಕೇರಳ ಪೋಲೀಸರು ನೀಡಿದ್ದ ಹೇಳಿಕೆ ರ್ಅಹೀನವಾಗಿದೆ. ಕಾಲಡಿ ಠಾಣೆಯ ಪೆÇಲೀಸ್ ಅಧಿಕಾರಿ ಸಿಯಾದ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅವರನ್ನು ಅಮಾನತುಗೊಳಿಸಲಾಗಿದೆ. ಹರತಾಳ ಹಿಂಸಾಚಾರ ಪ್ರಕರಣದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಕ್ರಮದಿಂದ ರಾಜ್ಯದ ಪೆÇಲೀಸ್ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದು ಸಾಬೀತಾಗಿದೆ. ಈ ಹಿಂದೆ 873 ಅಧಿಕಾರಿಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಎನ್‍ಐಎ ವರದಿಯನ್ನು ಪೆÇಲೀಸರು ತಿರಸ್ಕರಿಸಿದ್ದರು. ಇದಾದ ಬಳಿಕ ಸಿಯಾದ್ ಅವರನ್ನು ಅಮಾನತುಗೊಳಿಸಲಾಗಿದೆ.
ಪೆÇಲೀಸ್ ಪಡೆಯಲ್ಲಿ ಪಾಪ್ಯುಲರ್ ಫ್ರಂಟ್‍ನೊಂದಿಗೆ ಸಂಪರ್ಕ ಹೊಂದಿರುವ ಅಧಿಕಾರಿಗಳು ಪತ್ತೆಯಾದ ಬಗ್ಗೆ ಎನ್‍ಐಎ ತನಿಖೆ ಆರಂಭಿಸಿತ್ತು. ನಿμÉೀಧಿತ ಸಂಘಟನೆಯ ಕೆಲ ಸಕ್ರಿಯ ಕೇಂದ್ರಗಳ ಮುಖಂಡರಿಗೆ ಕಳೆದ ಕೆಲ ದಿನಗಳಿಂದ ದಾಳಿ ನಡೆಸಿ ಎಚ್ಚರಿಕೆ ನೀಡಿದ ಪೆÇಲೀಸ್ ಅಧಿಕಾರಿಗಳ ಮೇಲೂ ನಿಗಾ ಇಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಕರಿಮನ್ನೂರು ಪೆÇಲೀಸ್ ಠಾಣೆಯಿಂದ ಪಾಪ್ಯುಲರ್ ಫ್ರಂಟ್‍ಗೆ ಆರ್‍ಎಸ್‍ಎಸ್ ಮುಖಂಡರ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಅನಾಸ್ ಪಿ.ಕೆ ಎಂಬ ಸಿವಿಲ್ ಪೆÇಲೀಸ್ ಅಧಿಕಾರಿಯನ್ನು ವಜಾಗೊಳಿಸಲಾಗಿತ್ತು. ಮುನ್ನಾರ್ ಪೆÇಲೀಸ್ ಠಾಣೆಯಲ್ಲಿ ಇದೇ ಆರೋಪದ ಹಿನ್ನೆಲೆಯಲ್ಲಿ ಎಎಸ್‍ಐ ಸೇರಿದಂತೆ 3 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಅರ್ಥಹೀನವಾದ ಪೋಲೀಸರ ಸಮಜಾಯಿಷಿ: ಪಾಪ್ಯುಲರ್ ಫ್ರಂಟ್ ಜೊತೆ ಸಂಬಂಧ ಹೊಂದಿದ್ದ ಪೋಲೀಸ್ ಅಧಿಕಾರಿ ಅಮಾನತು
0
ಅಕ್ಟೋಬರ್ 04, 2022
Tags