ಆಲಪ್ಪುಳ: ಕೇರಳದ ಮೊದಲ ಪೋಸ್ಟ್ ವುಮೆನ್ ಇನ್ನು ನೆನಪುಮಾತ್ರ. ತೊಟ್ಟುಮುಖದ ಮನೆಯ ಕೆ.ಆರ್. ಆನಂದವಲ್ಲಿ ನಿಧನರಾಗಿದ್ದಾರೆ.
ಆರು ದಶಕಗಳ ಹಿಂದೆ ಪತ್ರಗಳ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಆನಂದವಲ್ಲಿ ಈಗ ಅಂಚೆ ಇತಿಹಾಸದ ಭಾಗವಾಗಿದ್ದಾರೆ.
ಚಿಕ್ಕಂದಿನಿಂದಲೂ ಅಂಚೆ ಕೆಲಸದಲ್ಲಿ ಆಸಕ್ತಿ ಹೊಂದಿದ್ದ ಆನಂದವಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಸಮೀಪದ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಿಯಾದರು. ಆ ನಂತರ ಪ್ರಯತ್ನದ ಮೂಲಕ ಅಂಚೆ ಬಟವಾಡೆ ಪರೀಕ್ಷೆಯಲ್ಲಿ ಜಯಭೇರಿ ಬಾರಿಸಿ, ನಂತರ ಅಂಚೆ ಬಟವಾಡೆಗೆ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕುಗಳನ್ನು ಜನರಿಗೆ ತಲುಪಿಸುವ ಕಾರ್ಯ ಆರಂಭಿಸಿದರು. ಅವರು ತಮ್ಮ ತಂದೆ ಖರೀದಿಸಿದ ರ್ಯಾಲಿ ಸೈಕಲ್‍ನಲ್ಲಿ ಪ್ರಯಾಣಿಸುತ್ತಿದ್ದರು. 1960ರ ದಶಕದಲ್ಲಿ ಆಲಪ್ಪುಳದ ಬೀದಿಗಳಲ್ಲಿ ಸೈಕಲ್ ತುಳಿಯುತ್ತಿದ್ದ ಆನಂದವಲ್ಲಿಯನ್ನು ಅಂದಿನ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಪೋಸ್ಟ್ ವುಮನ್ ಆಗಿ ಪಡೆದ ಮೊದಲ ಸಂಬಳ 97.50 ರೂಪಾಯಿ. ಅವರು ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಲ್ಲಿ ಗುಮಾಸ್ತರಾಗಿ ಮತ್ತು ಪೆÇೀಸ್ಟ್ಮಿಸ್ಟ್ರೆಸ್ ಆಗಿ ಸೇವೆ ಸಲ್ಲಿಸಿದರು. ಅವರು 1991 ರಲ್ಲಿ ಅಂಚೆ ಕಚೇರಿಯಿಂದ ನಿವೃತ್ತರಾದರು. ಅವರು ತಮ್ಮ ನಿವೃತ್ತಿಯ ಸಮಯದಲ್ಲಿ ಮತ್ತು ಅವರ ಅಂತಿಮ ದಿನಗಳಲ್ಲಿ ತಮ್ಮ ರ್ಯಾಲಿ ಬೈಸಿಕಲ್ ಅನ್ನು ಚಿನ್ನದಂತೆ ಉಳಿಸಿಕೊಂಡರು.
ಆಲಪ್ಪುಳ ತತ್ತಂಪಲ್ಲಿ ಕುನ್ನೆಪರಂಬಿಲ್ ವೈದ್ಯ ಕಲಾನಿಧಿ ಕೆ.ಆರ್. ರಾಘವನ್ ವೈದ್ಯರ ಹಿರಿಯ ಮಗಳು ಆನಂದವಲ್ಲಿ. ಪ್ರೌಢಶಾಲೆಯಿಂದ ಮೆಟ್ರಿಕ್ಯುಲೇಷನ್ ಮತ್ತು ಎಸ್.ಡಿ. ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನೂ ಪಡೆದಿದ್ದಾರೆ. ಸಂಸ್ಕøತ ಶಿಕ್ಷಕ ದಿವಂಗತ ವಿ.ಕೆ. ರಾಜನ್ ಪತಿ. ಮಕ್ಕಳು: ಆರ್. ಧನರಾಜ್ (ಛಾಯಾಗ್ರಾಹಕ) ಮತ್ತು ಉμÁ ಕುಮಾರಿ ಪುತ್ರಿ.
s