ಕಾಸರಗೋಡು: ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ, ಕೇಂದ್ರ ಸಾಕ್ಷರತಾ ಉಪಕ್ರಮ, ಜಿಲ್ಲೆಯಲ್ಲಿ ಸಾಕ್ಷರತೆ ಶೇಕಡಾವಾರು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ.
ರಾಜ್ಯ ಸಾಕ್ಷರತಾ ಮಿಷನ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳ ವಿವಿಧ ವಾರ್ಡ್‍ಗಳಲ್ಲಿ ಅನಕ್ಷರಸ್ಥರನ್ನು ಪತ್ತೆ ಮಾಡಲು ಡಿಜಿಟಲ್ ಸಮೀಕ್ಷೆ ಆರಂಭಿಸಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕುಟುಂಬಶ್ರೀ ಕಾರ್ಯಕರ್ತರು, ಆಶಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಚಾರಕರು ಹಸಿರು ಪಡೆ, ಸಾರ್ವಜನಿಕ ಕಾರ್ಯಕರ್ತರು, ಗ್ರಂಥಾಲಯ ಕಾರ್ಯಕರ್ತರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಾರ್ಡ್‍ಗಳಲ್ಲಿ ಡಿಜಿಟಲ್ ಸಮೀಕ್ಷೆ ನಡೆಸಲಾಗುತ್ತಿದೆ ಚೆಮ್ನಾಡು ಗ್ರಾಮ ಪಂಚಾಯಿತಿಯ ಅಲೆಚೇರಿ ವಾರ್ಡ್‍ನಲ್ಲಿ ಜಿಲ್ಲಾ ಸಾಕ್ಷರತಾ ಮಿಷನ್ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು 72 ವರ್ಷದ ಜಾನಕಿಯಮ್ಮ ಅವರಿಗೆ ಆನ್‍ಲೈನ್ ಅರ್ಜಿಯನ್ನು ಸೇರಿಸುವ ಮೂಲಕ ಜಿಲ್ಲಾ ಮಟ್ಟದ ಸಮೀಕ್ಷೆಯನ್ನು ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷೆ ಸುಫೈಜಾ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನ್ಸೂರ್ ಕುರಿಕಲ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶಂಸುದ್ದೀನ್ ತೆಕ್ಕಿಲ್, ಗ್ರಾಮ ಪಂಚಾಯಿತಿ ಸದಸ್ಯರು, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಕೆ.ವಿ.ಪಿ.ಎನ್.ಬಾಬು, ಸಿಡಿಎಸ್ ಉಪಾಧ್ಯಕ್ಷೆ ಅನಿಸಾ ಪಾಲೋತ್, ಕಾರ್ಯದರ್ಶಿ ಜರೀನಾ ಅಬ್ದುಲ್ ಖಾದರ್, ಸಾಕ್ಷರತಾ ಮಿಷನ್ ಪ್ರೇರಕ್ ತಂಗಮಣಿ ಉಪಸ್ಥಿತರಿದ್ದರು.
ಅ. 12ರ ವರೆಗೆ ಸಮೀಕ್ಷೆ ಮುಂದುವರಿಯಲಿದೆ. ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯರಾದ ಪಪ್ಪನ್ ಕುಟ್ಟಮಠ್, ಕೆ.ವಿ.ರಾಘವನ್, ಕೆ.ವಿ.ವಿಜಯನ್, ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ಅವರು ವಿವಿಧ ಪಂಚಾಯಿತಿಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ನವ ಭಾರತ ಸಾಕ್ಷರತಾ ಕಾರ್ಯಕ್ರಮ: ಜಿಲ್ಲೆಯಲ್ಲಿ ಡಿಜಿಟಲ್ ಸಾಕ್ಷರತಾ ಸಮೀಕ್ಷೆಗೆ ಚಾಲನೆ
0
ಅಕ್ಟೋಬರ್ 10, 2022
Tags