ಕಾಸರಗೋಡು: ಪ್ರವಾದಿ ಮೊಹಮ್ಮದ್(ಸ) ಜನ್ಮದಿನವನ್ನು ಜಿಲ್ಲಾದ್ಯಂತ ಭಕ್ತಿ ಸಡಗರದಿಂದ ಭಾನುವಾರ ಆಚರಿಸಲಾಯಿತು. ಮದರಸಾಗಳಲ್ಲಿ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲೆ ಮತ್ತು ಸಾಹಿತ್ಯ ಕಾರ್ಯಕ್ರಮಗಳು ಮತ್ತು ಮೌಲಿದ್ ಪಾರಾಯಣ, ವಿದ್ಯಾರ್ಥಿಗಳಿಂದ ಪ್ರವಾದಿ ದಿನಾಚರಣೆಯೂ ನಡೆಯಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಕುಣಿತ, ರ್ಯಾಲಿ, ನಾನಾ ಪ್ರದೇಶದಲ್ಲಿ ಪಾನೀಯ-ತಿನಿಸು ವಿತರಣಾ ಕಾರ್ಯ ನಡೆಯಿತು.
ಕಾಸರಗೋಡು ತಳಂಗರೆಯ ಮಲಿಕ್ ದಿನಾರ್ ದೊಡ್ಡ ಜುಮಾ ಮಸೀದಿವರೆಗೆ ವಿವಿಧ ಮದರಸಾಗಳಿಂದ ಆಗಮಿಸಿದವರಿಂದ ಪ್ರವಾದಿ ದಿನಾಚರಣೆ ನಡೆಸಲಾಯಿತು. ಮಸೀದಿ ವಠಾರದಲ್ಲಿ ವಿವಿಧ ತಂಡಗಳು ನಡೆಸಿಕೊಟ್ಟ ದಫ್ ಕುಣಿತ ಆಕರ್ಷಣೆಗೆ ಕಾರಣವಾಯಿತು. ಇನ್ನೊಂದೆಡೆ ಮದ್ರಸಾ ವಿದ್ಯಾರ್ಥಿಗಳು ಮಾದಕ ದ್ರವ್ಯ ವಿರೋಧಿ ರ್ಯಾಲಿ ನಡೆಸಿಕೊಡುವ ಮೂಲಕ ಹಬ್ಬದ ದಿನದಂದು ಡ್ರಗ್ಸ್ ವಿರೋಧಿ ಪ್ರತಿಜ್ಞೆ ಕೈಗೊಂಡರು.
ಶುಕ್ರವಾರ ರಾತ್ರಿಯಿಂದಲೇ ಮಸೀದಿಗಳಲ್ಲಿ ಮೌಲಿದ್ ಪಾರಾಯಣ ಮತ್ತು ವಿಶೇಷ ಚಿರಣಿ ವಿತರಣೆ ನಡೆಯಿತು. ಕಾಸರಗೋಡು ಜಿಲ್ಲೆಯ ನಾನಾ ಮಸೀದಿ, ಮದ್ರಸಾ ಸಮಿತಿಗಳಿಂದ ಪ್ರವಾದಿ ಮಹಮ್ಮದ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.