ಕಾಸರಗೋಡು: ಬ್ಯಾಗ್ ಗಳನ್ನು ಕಳವುಗೈದ ಬಳಿಕ ಬಳಿಕ ಬ್ಯಾಗಿನೊಳಗಿನ ವಸ್ತುಗಳನ್ನು ತಮ್ಮ ಬ್ಯಾಗೊಳಗೆ ತುಂಬಿಸಿ ಕಳವುಗೈದ ಬ್ಯಾಗನ್ನು ಎಸೆಯುವುದು ಸಾಮಾನ್ಯವಾಗಿ ಕಳ್ಳರು ಅನುಸರಿಸುವ ಕ್ರಮ. ಕಾಞಂಗಾಡ್ ಪುಲ್ಲೂರಿಗೆ ಬಂದ ಕಳ್ಳನೊಬ್ಬ ಅದಕ್ಕಿಂತ ತೀರಾ ಭಿನ್ನ. ಈ ಒಳ್ಳೆಯ ಕಳ್ಳನು ಬ್ಯಾಗ್‍ನಲ್ಲಿದ್ದ ಹಣವನ್ನು ಕದ್ದು ಮರುದಿನ ಬೆಲೆಬಾಳುವ ದಾಖಲೆಗಳನ್ನು ಹಿಂದಿರುಗಿಸಿದ ಘಟನೆ ಅಚ್ಚರಿಗೆ ಕಾರಣವಾಗಿದೆ. ಪುಲ್ಲೂರು ಪೆÇಲ್ಲಕಡದ ಕಿರಾಣಿ ವ್ಯಾಪಾರಿ ಎಂ ಗೋವಿಂದನ್ ದರೋಡೆಗೆ ಒಳಗಾದವರು.
ಮೊನ್ನೆ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಹೆಲ್ಮೆಟ್ ಧರಿಸಿದ್ದ ಯುವಕ ಗೋವಿಂದನ್ ಅಂಗಡಿಗೆ ಆಗಮಿಸಿ ಹಣ್ಣು ಬೇಕೆಂದು ಕೇಳಿದ್ದ. ಹಣ್ಣು ತೂಗಲು ಅಂಗಡಿಯೊಳಗೆ ತೆರಳಿದ್ದ ವೇಳೆ ಆಗಂತುಕ ಯುವಕ ಮನೆಗೆ ಹೊರಟು ಹೊರಗಿರಿಸಿದ್ದ ಗೋವಿಂದನ್ ಅವರ ಬ್ಯಾಗಿನೊಂದಿಗೆ ತಕ್ಷಣ ಕಾಲ್ಕಿತ್ತಿದ್ದ. ಬ್ಯಾಗ್ ನಲ್ಲಿ 4800 ರೂ., ಹೊಸ ಮನೆಯ ಕೀ ಮತ್ತು ದಾಖಲೆಗಳಿದ್ದವು. ಇದೇ ವೇಳೆ ಆ ತಕ್ಷಣ ಗೋವಿಂದನ್ ಅವರಿಗೂ ಕಳವು ಗಮನಕ್ಕೆ ಬಂದಿರಲಿಲ್ಲ. ಹಣ್ಣು ಕೊಳ್ಳಲು ಬಂದವರು ಬೇರೆ ಯಾವುದೋ ಕೆಲಸಕ್ಕೆ ಹೋಗಿದ್ದಾರೆಂದು ಭಾವಿಸಿ ಮತ್ತೆ ಅಂಗಡಿ ಮುಚ್ಚಿ ನೋಡಿದಾಗ ಚೀಲ ಕಳವಾಗಿರುವುದು ಗೊತ್ತಾಗಿದೆ ಎಂದು ಗೋವಿಂದನ್ ತಿಳಿಸಿದರು.
ಗೋವಿಂದನ ದೂರಿನ ಮೇರೆಗೆ ಅಂಬಲತ್ತರ ಪೋಲೀಸರು ತನಿಖೆ ಆರಂಭಿಸಿದರೂ ಕಳ್ಳ ಪತ್ತೆಯಾಗಿರಲಿಲ್ಲ. ಇದೇ ವೇಳೆ ಕಳ್ಳನ ಶಂಕಿತ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಪೋಲೀಸರು ಇದನ್ನು ಬಿಡುಗಡೆ ಮಾಡಿದ ನಂತರ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ, ಕಳ್ಳ ಮರುದಿನ ಬೆಳಿಗ್ಗೆ ಮತ್ತೆ ಅಂಗಡಿಯನ್ನು ತಲುಪಿದನು. ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದ ಕಳ್ಳ ಬ್ಯಾಗ್ ನ್ನು ಅಂಗಡಿಯೊಳಗೆ ಎಸೆದು ಪರಾರಿಯಾಗುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟರಲ್ಲಿ ಬ್ಯಾಗ್ ನಲ್ಲಿದ್ದ ಹಣ ಮಾತ್ರ ಕಳೆದು ಹೋಗಿತ್ತು. ಮೌಲ್ಯದ ದಾಖಲೆ ಪತ್ರಗಳು ಹಾಗೂ ಮನೆಯ ಕೀಲಿಗಳು ಬ್ಯಾಗ್ ನಲ್ಲಿದ್ದವು. ಎರಡೂ ಘಟನೆಗಳ ದೃಶ್ಯಾವಳಿಗಳನ್ನು ಪಡೆದ ನಂತರ ಅಂಬಲತ್ತರ ಪೋಲೀಸರು ಒಳ್ಳೆಯ ಕಳ್ಳನ ಹುಡುಕಾಟದಲ್ಲಿ ತನಿಖೆಯನ್ನು ವೇಗಗೊಳಿಸಿದ್ದಾರೆ.
ಹಣ ಮಾತ್ರ ಸಾಕು, ದಾಖಲೆಗಳನ್ನೊಳಗೊಂಡ ಬ್ಯಾಗ್ ಹಿಂತಿರುಗಿಸಿದ ಒಳ್ಳೆಯ ಕಳ್ಳ!: ಶೋಧ ತೀವ್ರಗೊಳಿಸಿದ ಪೋಲೀಸರು
0
ಅಕ್ಟೋಬರ್ 09, 2022