ಕಾಸರಗೋಡು: ಮಧೂರಿನ ಯಕ್ಷಕಲಾ ಕೌಸ್ತುಭ ಸಂಸ್ಥೆಯ ಉದ್ಘಾಟನೆ, ಕಲ ಗೌರವಾರ್ಪಣೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಹಾಗೂ ಯಕ್ಷಗಾನ ಪ್ರದರ್ಶನ ಅ. 30ರಂದು ಸಂಜೆ 4ಕ್ಕೆ ಮಧೂರು ಸನಿಹದ ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನದ ನಟರಾಜ ಮಂಟಪದಲ್ಲಿ ಜರುಗಲಿದೆ.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕಲಾವಿದ ಮಹಾಬಲೇಶ್ವರ ಭಟ್ಟ ಭಾಗಮಂಡಲ ಅವರಿಗೆ ಕಲಾ ಗೌರವಾರ್ಪಣೆ ನಡೆಯುವುದು. ಕಾರ್ಯಕ್ರಮದ ಅಂಗವಾಗಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯುವುದು.
ಮಧೂರು: ಇಂದು ಯಕ್ಷಕಲಾ ಕೌಸ್ತುಭ ಸಂಸ್ಥೆಯ ಉದ್ಘಾಟನೆ, ಯಕ್ಷಗಾನ
0
ಅಕ್ಟೋಬರ್ 29, 2022