ನವದೆಹಲಿ: ಚುನಾವಣಾ ಪ್ರಕ್ರಿಯೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ದೇಶದಾದ್ಯಂತ 2.5 ಲಕ್ಷ ಮಂದಿ ಶತಾಯುಷಿ ಮತದಾರರಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ.
'ನಿಮ್ಮಂತಹ ಜವಾಬ್ದಾರಿಯುತ ಹಿರಿಯ ನಾಗರಿಕರಿಂದ ಪ್ರಜಾಪ್ರಭುತ್ವವು ಪ್ರವರ್ಧಮಾನಕ್ಕೆ ಬರುತ್ತಿದೆ' ಎಂದು ರಾಜೀವ್ ಅವರು ಪತ್ರದಲ್ಲಿ ಹೇಳಿದ್ದಾರೆ.