ಕಾಸರಗೋಡು: ಹಿರಿಯ ಕಾಂಗ್ರೆಸ್ ಮುಖಂಡ, ಖ್ಯಾತ ಕ್ರಿಮಿನಲ್ ವಕೀಲ ಸಿ.ಕೆ.ಶ್ರೀಧರನ್ ಅವರು ರಾಜಕೀಯ ಮತ್ತು ಕಾನೂನು ಕ್ಷೇತ್ರಗಳೆರಡರಲ್ಲೂ ಅದ್ಭುತ ವ್ಯಕ್ತಿತ್ವ ಮೆರೆದ ಅಜಾತಶತ್ರುವಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅವರು ಕಾಞಂಗಾಡಿನಲ್ಲಿ ಸಿ.ಕೆ.ಶ್ರೀಧರನ್ ಅವರ ಆತ್ಮಕಥೆ 'ಅಡ್ವ. ಸಿ.ಕೆ.ಶ್ರೀಧರನ್ ಅವರ ಜೀವನ, ಕಾನೂನು, ಆಚರಣೆಗಳು'ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಕೆಲವರು ಕಾನೂನು ಕ್ಷೇತ್ರದಲ್ಲಿ ಮಿಂಚಿದರೆ, ಇನ್ನು ಕೆಲವರು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಆದರೆ ಸಿ.ಕೆ.ಶ್ರೀಧರನ್ ಅವರು ಎರಡೂ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಖ್ಯಾತ ವಕೀಲರಲ್ಲಿ ಒಬ್ಬರಾದ ಸಿ.ಕೆ.ಶ್ರೀಧರನ್ ಅವರು ಕೇರಳದಲ್ಲಿ ಹಲವು ಉನ್ನತ ಪ್ರಕರಣಗಳನ್ನು ವಾದಿಸಿ ಇವುಗಳಿಗೆ ನ್ಯಾಯ ಒದಗಿಸಿಕೊಟ್ಟವರಾಗಿದ್ದಾರೆ. ಚುನಾವಣೆಯಲ್ಲಿ ಸೋತರೆ ರಾಜಕೀಯ ಕ್ಷೇತ್ರದಿಂದ ದೂರ ಉಳಿಯುವ ಪ್ರವೃತ್ತಿಯೂ ರಾಜಕೀಯದಲ್ಲಿದೆ. ಆದರೆ ಸಿ.ಕೆ.ಶ್ರೀಧರನ್ ರಾಜಕೀಯದಲ್ಲಿ ಹತ್ತು ಪಟ್ಟು ಬಲದೊಂದಿಗೆ ಸಕ್ರಿಯವಾಗಿ ಕಾಣಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಸಿಕೆ ಶ್ರೀಧರನ್ ಅವರ ಆತ್ಮಕಥೆಯನ್ನು ಆಲಿವ್ ಬುಕ್ಸ್ ಪ್ರಕಟಿಸಿದೆ. ಮಾಜಿ ಸಚಿವ ಡಾ. ಎಂ.ಕೆ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಎನ್. ಕೆ ಬಾಲಕೃಷ್ಣನ್, ಅಡ್ವೊಕೇಟ್ ಜನರಲ್ ಕೆ. ಗೋಪಾಲಕೃಷ್ಣ ಕುರುಪ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ತಾಹಾ ಮಾತಾಯಿ, ಕೆ. ವೇಣುಗೋಪಾಲನ್ ನಂಬಿಯಾರ್, ಶಾಸಕ ಎಂ. ರಾಜಗೋಪಾಲನ್, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಎನ್.ಎ.ಖಾಲೀದ್, ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ ಉಪಸ್ಥಿತರಿದ್ದರು. ಬಶೀರ್ ಆರಂಗಡಿ ಸ್ವಾಗತಿಸಿದರು.
ಸಿ.ಕೆ ಶ್ರೀಧರನ್‍ರಾಜಕೀಯ, ಕಾನೂನು ಕ್ಷೇತ್ರದ ಅಜಾತಶತ್ರು: ಆತ್ಮಚರಿತ್ರೆ ಬಿಡುಗಡೆಗೊಳಿಸಿ ಸಿ.ಎಂ ಪಿಣರಾಯಿ ವಿಜಯನ್ ಬಣ್ಣನೆ
0
ಅಕ್ಟೋಬರ್ 21, 2022
Tags