ಕಣ್ಣೂರು: ನಾಯಿಯನ್ನು ಕೊಲ್ಲುವುದು ಯಾವುದಕ್ಕೂ ಪರಿಹಾರವಲ್ಲ ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿರುವರು. ಬೀದಿನಾಯಿಗಳ ಉಪಟಳವನ್ನು ಪರಿಹರಿಸಲು, ಅವುಗಳನ್ನು ಕೊಲ್ಲುವುದರಲ್ಲಿ ಅರ್ಥವಿಲ್ಲ ಮತ್ತು ನಾಯಿಗಳ ಮೇಲೆ ದಾಳಿ ಮಾಡುವವರನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು ಎಂದು ಸಚಿವರು ಹೇಳಿದರು.
ನಾಯಿಯನ್ನು ಕೊಲ್ಲುವುದು ಎಂದಿಗೂ ಪರಿಹಾರವಲ್ಲ ಎಂಬುದು ಸರ್ಕಾರದ ಅಭಿಪ್ರಾಯ. ಆದರೆ ಕೆಲವರು ಬೀದಿ ನಾಯಿಗಳನ್ನು ಕೊಲ್ಲಲು ಉತ್ಸುಕರಾಗಿದ್ದಾರೆ. ಸರ್ಕಾರದ ಯೋಜನೆಗಳಿಗೆ ಸಹಕಾರ ನೀಡುತ್ತಿಲ್ಲ ಎಂದರು.
ನಾಯಿಗಳನ್ನು ಹೊಡೆದು ಸಾಯಿಸುತ್ತಾರೆ, ಕಟ್ಟಿಹಾಕಿ ಕೊಲೆಗೈಯ್ಯುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಕೊಟ್ಟಾಯಂ ಎಟುಮನೂರಿನಲ್ಲಿ ಏಳು ಮಂದಿಗೆ ಕಚ್ಚಿದ ನಾಯಿಗೆ ರೇಬಿಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ತಿರುವಲ್ಲಾದಲ್ಲಿ ನಡೆಸಿದ ತಪಾಸಣೆಯಲ್ಲಿ ಇದು ದೃಢಪಟ್ಟಿದೆ. ಕಳೆದ ತಿಂಗಳು 28ರಂದು ನಾಯಿ ಏಳು ಮಂದಿಗೆ ಕಚ್ಚಿತ್ತು. ಕಚ್ಚಿದವರಿಗೆಲ್ಲ ಲಸಿಕೆ ಹಾಕಲಾಗಿದೆ.
ಕೊಲ್ಲುವುದು ಯಾವುದನ್ನೂ ಪರಿಹರಿಸುವುದಿಲ್ಲ; ನಾಯಿಗಳನ್ನು ಕೊಲ್ಲುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು: ಎಂ.ಬಿ.ರಾಜೇಶ್
0
ಅಕ್ಟೋಬರ್ 04, 2022