HEALTH TIPS

ಕುಂಬಳೆಯಲ್ಲಿ ಬಿಜೆಪಿಯಿಂದ ದೇಶರಕ್ಷಾ ಸಂಗಮ ಕಾರ್ಯಕ್ರಮ:ಉಭಯ ರಂಗಗಳ ಆಡಳಿತದಿಂದ ಕೇರಳ ಸರ್ವನಾಶ: ಭಾರೀ ಜನಸ್ತೋಮವನ್ನು ಉದ್ಘಾಟಿಸಿದ ಕೆ.ಸುರೇಂದ್ರನ್



           ಕುಂಬಳೆ: ಕೇರಳದಲ್ಲಿ ಸರದಿಯಲ್ಲಿ ಅಧಿಕಾರ ನಡೆಸುತ್ತಿರುವ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ರಾಜ್ಯವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದ್ದು  ಸರ್ವನಾಶಕ್ಕೆ ಕಾರಣವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
            ರಾಜ್ಯದಲ್ಲಿ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ಭÀಯೋತ್ಪಾದನಾ ಸಂಘಟನೆಗಳೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸಿ ಈ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾದ ದೇಶ ರಕ್ಷಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.



           ಮತೀಯ ಭಯೋತ್ಪಾದಕರಿಗೆ ಕೇರಳ ಶರಣಾಗದು ಮತೀಯ ಭಯೋತ್ಪಾದಕರಿಗೆ ಕೇರಳ ಎಂದಿಗೂ ಶರಣಾಗದು. ಈ ನಿಟ್ಟಿನಲ್ಲಿ  ಉಭಯ ಒಕ್ಕೂಟಗಳ ಷಡ್ಯಂತ್ರಗಳು ಎಂದಿಗೂ ಫಲಿಸದು ಎಂದು ಕೆ.ಸುರೇಂದ್ರನ್ ಹೇಳಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ)ಗೆ ಕೇರಳವನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ರಕ್ತಪಾತಕ್ಕೆ ಮತೀಯ ಭಯೋತ್ಪಾದಕರು ಸಂಚು ರೂಪಿಸಿದ್ದರು. ರಾಜ್ಯದ ವಿವಿಧೆಡೆ ಗಲಭೆಯೆಬ್ಬಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಪಿಎಫ್‍ಐಯ ಕೃತ್ಯವಾಗಿತ್ತು. ಆದರೆ ಕೇಂದ್ರ ಸರ್ಕಾರವು ಸರಿಯಾದ ಸಮಯದಲ್ಲಿ ಉಗ್ರಗಾಮಿ ಬೆಂಬಲಿತ ಸಂಘಟನೆಗಳನ್ನು ನಿಷೇಧಿಸಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನುಡಿದರು.
           ಜಮ್ಮು ಮತ್ತು ಕಾಶ್ಮೀರದಲ್ಲಿ ಮತಾಂಧ ಭಯೋತ್ಪಾದಕರನ್ನು ನಿಗ್ರಹಿಸಿದರೆ, ಕೇರಳದಲ್ಲಿಯೂ ಕೇಂದ್ರ ಸರ್ಕಾರವು ಅವರನ್ನು ಹೆಡೆಮುರಿ ಕಟ್ಟಿದೆ. ನಿಷೇಧಿತ ಸಂಘಟನೆ ಪಿಎಫ್‍ಐ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಪೈಪೆÇೀಟಿ ನಡೆಸುತ್ತಿವೆ. ಹಗಲಿನಲ್ಲಿ ಸಿಪಿಎಂಗಾಗಿ ಕೆಲಸ ಮಾಡುವವರು ರಾತ್ರಿಯಲ್ಲಿ ಪಿಎಫ್‍ಐಗಾಗಿ ಕೆಲಸ ಮಾಡುತ್ತಿದ್ದರು. ಅಂತವರು ಎಡಪಕ್ಷದಲ್ಲಿದ್ದುಕೊಂಡು ಚುನಾವಣೆ ಸಂದರ್ಭದಲ್ಲಿ ಮುಸ್ಲಿಂಲೀಗ್‍ಗೆ ಮತ ಹಾಕುತ್ತಾರೆ ಎಂದು ಕೆ.ಸುರೇಂದ್ರನ್ ಹೇಳಿದರು.
          ಡ್ರಗ್ಸ್ ಮಾಫಿಯಾಗಳು ಮತೀಯ ಭಯೋತ್ಪಾದನೆಗಾಗಿ ಕೆಲಸ ಮಾಡುತ್ತಿವೆ. ದೇಶದ್ರೋಹಿಗಳ ಮೂಲಕ ಕೇರಳಕ್ಕೆ ಡ್ರಗ್ಸ್ ರವಾನೆಯಾಗುತ್ತದೆ. ಆದರೆ ಪಿಣರಾಯಿ ವಿಜಯನ್ ಸರ್ಕಾರವು ಅವರ ವಿರುದ್ಧ ಚಕಾರ ಎತ್ತುತ್ತಿಲ್ಲ. ನಾಲ್ಕು ಪೋಟಿಗಾಗಿ ಕೇರಳದ ಸೆಕ್ಯುಲರ್ ಪಕ್ಷಗಳು ಮತೀಯ  ಉಗ್ರಗಾಮಿಗಳ ಜೊತೆ ಕೈ ಜೋಡಿಸಿವೆ ಎಂದು ಅವರು ತಿಳಿಸಿದರು.


          ಮುಖ್ಯಮಂತ್ರಿಯಿಂದ ಮೋಜು ಮಸ್ತಿ:
          ಮುಖ್ಯಮಂತ್ರಿಗಳು ವಿದೇಶ ಪ್ರವಾಸದ ಮೂಲಕ ಮೋಜು ಮಸ್ತಿ ಮಾಡುವುದನ್ನು ಬಿಟ್ಟರೆ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ವಿದೇಶ ಪ್ರವಾಸದ ಬಗ್ಗೆ ಪಿಣರಾಯಿ ವಿಜಯನ್ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಕೇರಳದ ಜನರನ್ನು ಮೆಚ್ಚಿಸಲು ಪಿಣರಾಯಿ ವಿಜಯನ್ ತಂತ್ರ ರೂಪಿಸಿರುವುದು ಎಲ್ಲರಿಗೂ ಅರಿವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೆಂದು ಹೇಳುವ ಮುಖ್ಯಮಂತ್ರಿಗಳ ಬಾಲಿಷ ಕ್ರಮವು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದರು.
                ಕೇರಳವನ್ನು ರಕ್ಷಿಸಿದ್ದು ಮೋದಿ ಸರ್ಕಾರ:
             ಕೋವಿಡ್ ಸಮಯದಲ್ಲಿ ಕೇರಳವನ್ನು ಹಸಿವಿನಿಂದ ರಕ್ಷಿಸಿದ್ದು ಮೋದಿ ಸರ್ಕಾರವಾಗಿದೆ. ಲಸಿಕೆಯನ್ನು ನೀಡಿದ್ದು ಮತ್ತು ಕೋವಿಡ್ ವಿರುದ್ದದ ರಕ್ಷಣಾ ವಸ್ತುಗಳನ್ನು ಒದಗಿಸಿದ್ದು ಕೂಡಾ ಕೇಂದ್ರ ಸÀರ್ಕಾರ. ಆದರೆ ಕೋವಿಡ್ ಸಮಯದಲ್ಲಿ ಪಿಪಿಇ ಕಿಟ್ ಮತ್ತು ಇತರ ವಸ್ತುಗಳ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿರುವುದು ಕೇರಳ ಸರ್ಕಾರದ ಸಾಧನೆಯಾಗಿದೆ. ಎಂಡೋಸಲ್ಪಾನ್ ಪೀಡಿತರನ್ನು ಅವಮಾನಿಸಿದ್ದಕ್ಕಾಗಿ ಉದುಮ ಶಾಸಕ ಸಿ.ಎಚ್.ಕುಂಞಂಬು ಕ್ಷಮೆ ಯಾಚಿಸಬೇಕು ಎಂದು ಕೆ.ಸುರೇಂದ್ರನ್ ಆಗ್ರಹಿಸಿದರು.
          ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿಗಳಾದ ವಕೀಲ ಕೆ.ಪಿ.ಪ್ರಕಾಶ್‍ಬಾಬು, ವಕೀಲ ಕೆ.ಶ್ರೀಕಾಂತ್, ರಾಜ್ಯ ಸೆಲ್ ಸಂಯೋಜಕ ಅಶೋಕನ್ ಕುಳನಾಡ, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಪಿ.ಸುರೇಶ್‍ಕುಮಾರ್ ಶೆಟ್ಟಿ , ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಆರ್.ಪ್ರಫುಲ್‍ಕೃಷ್ಣ , ಕಾಶೀನಾಥ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಎಂ.ಸಂಜೀವ ಶೆಟ್ಟಿ , ಪ್ರಮೀಳಾ ಸಿ.ನಾಯ್ಕ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ಪ್ರಮುಖರಾದ ಸವಿತಾ ಟೀಚರ್, ಕೋಳಾರು ಸತೀಶ್ಚಂದ್ರ ಭಂಡಾರಿ, ವಕೀಲ ವಿ.ಬಾಲಕೃಷ್ಣ ಶೆಟ್ಟಿ, ಎಂ.ಸುಧಾಮ ಗೋಸಾಡ, ಎಂ.ಬಾಲರಾಜ್, ಎಂ.ಪಿ.ರಾಮಪ್ಪ ಮಂಜೇಶ್ವರ, ರೂಪವಾಣಿ ಆರ್.ಭಟ್, ಎಂ.ಜನನಿ, ಅಶ್ವಿನಿ ಎಂ.ಎಲ್.ಪಜ್ವ, ಅಂಜು ಜೋಸ್ಟಿ, ಎ.ಕೆ.ಕಯ್ಯಾರು, ಧನಂಜಯ  ಮಧೂರು, ಪುಷ್ಪಾ ಗೋಪಾಲನ್, ಸಂಪತ್‍ಕುಮಾರ್, ಈಶ್ವರ ನಾಯ್ಕ್  ಮುಂತಾದವರು ಉಪಸ್ಥಿತರಿದ್ದರು.
           ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕುಮಾರ್ ರೈ ಸ್ವಾಗತಿಸಿ, ಕುಂಬಳೆ ಮಂಡಲಾಧ್ಯಕ್ಷ ಸುನೀಲ್ ಅನಂತಪುರ ವಂದಿಸಿದರು. ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ಕಾರ್ಳೆ ಪ್ರಾರ್ಥನೆ ಹಾಡಿದರು.
ಬಿಜೆಪಿ ಮಂಜೇಶ್ವರ, ಕುಂಬಳೆ, ಕಾಸರಗೋಡು, ಬದಿಯಡ್ಕ, ಮುಳಿಯಾರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶ ರಕ್ಷಣೆಯ ಪ್ರತಿಜ್ಞೆ ಕೈಗೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries