ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಉಂಟಾದ ಅವಘಡದಲ್ಲಿ ಮೃತರಾದ ಸೈನಿಕರ ಪೈಕಿ ಕಾಸರಗೋಡು ಮೂಲದವರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬಕ್ಕೆ ಲಭಿಸಿದೆ. ಚೆರುವತ್ತೂರು ಕೆಳಕಮೂರಿನ ಕಟ್ಟುವಳಪ್ ನ ಶೋಕ ಅವರ ಪುತ್ರ ಕೆ.ವಿ.ಅಶ್ವಿನ್ (24) ಮೃತರು. ಓಣಂ ರಜೆ ಮುಗಿದು ಒಂದು ತಿಂಗಳ ಹಿಂದೆ ಅಶ್ವಿನ್ ಕೆಲಸಕ್ಕೆ ಮರಳಿದ್ದರು. ಶುಕ್ರವಾರ ಬೆಳಗ್ಗೆ ಸೇನಾ ವಿಮಾನ ಪತನಗೊಂಡಿದೆ.
ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಗ್ಗಿಂಗ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಸಂಜೆ ಆರು ಗಂಟೆಗೆ ಸೇನೆಯ ಅಧಿಕಾರಿಗಳು ಮನೆಗೆ ಕರೆ ಮಾಡಿ ಮಾಹಿತಿ ನೀಡಿರುವÀರು. ಹೆಲಿಕಾಪ್ಟರ್‍ನಲ್ಲಿ ಐವರು ಸೈನಿಕರು ಇದ್ದರು. ಪ್ರತಿಕೂಲ ಹವಾಮಾನವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಅಪಘಾತ ನಡೆದ ಸ್ಥಳಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ. ನಾಲ್ಕು ವರ್ಷಗಳ ಹಿಂದೆ ಅಶ್ವಿನ್ ಭಾರತೀಯ ಸೇನೆಗೆ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಎಂಜಿನಿಯರ್ ಆಗಿ ಸೇರಿದ್ದರು.
ಭಾರತೀಯ ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ಓಣಂ ರಜೆಯ ನಂತರ ಅಶ್ವಿನ್ ಮತ್ತೆ ಕೆಲಸಕ್ಕೆ ತೆರಳಿದ್ದರು. ತಾಯಿ ಎ.ಕೆ.ಕೌಸಲ್ಯ. ಅಶ್ವತಿ ಮತ್ತು ಅನಸ್ವರ ಒಡಹುಟ್ಟಿದವರು. ಮೃತದೇಹವನ್ನು ಇಂದು ಸಂಜೆ ಹುಟ್ಟೂರಿಗೆ ತರುವ ಸಾಧ್ಯತೆಯಿದೆ ಎಂದು ತಿಳಿಯಲಾಗಿದ
ೆ.