ಪಾಲಕ್ಕಾಡ್: ಅನಂತಪುರ ದೇವಸ್ಥಾನದ ಸರೋವರದÀ ಮೊಸಳೆ ಬಬಿಯಾ ಕಣ್ಮರೆಯ ಬೆನ್ನಿಗೇ ಪಾಲಕ್ಕಾಡ್‍ನ ದೇವಸ್ಥಾನವೊಂದರಲ್ಲಿದ್ದ ನಿರುಪದ್ರವಿ ಮೊಸಳೆಯೊಂದರ ಹೆಸರೀಗ ಪ್ರಚಾರಪಡೆಯುತ್ತಿದೆ. ಬಾಬಿಯಾಳಂತೆಯೇ ಯಾರಿಗೂ ತೊಂದರೆ ಕೊಡದ ನಿರುಪದ್ರವಿ ಪಾಪದ ಮೊಸಳೆ..
ಕುತ್ತನೂರು ದಕ್ಷಿಣಾಮೂರ್ತಿ ದೇವಸ್ಥಾನದ ಸರೋವರದಲ್ಲಿ ಜನರಿಂದ ಪೂಜಿಸಲ್ಪಟ್ಟ ಮೂಡಲಮ್ಮ ವಾಸಿಸುತ್ತಿದ್ದಳು. 2016ರಲ್ಲಿ ಸಾವನ್ನಪ್ಪಿದ ಮೊಸಳೆಯ ನೆನಪಿಗಾಗಿ ಭಕ್ತರು ದೇವಸ್ಥಾನದಲ್ಲಿ ಪ್ರತಿಮೆ ಸ್ಥಾಪಿಸಿದ್ದಾರೆ.
ಕುತ್ತನೂರು ದಕ್ಷಿಣಾಮೂರ್ತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವಸ್ಥಾನದ ಸರೋವರದಲ್ಲಿ ಮೂಡಲಮ್ಮ ಆಕರ್ಷಣೀಯವಾಗಿತ್ತು. ಮೂಡಲಮ್ಮನ ವಿಶೇಷತೆ ಏನೆಂದರೆ ದೇವಸ್ಥಾನಕ್ಕೆ ಬರುವ ಯಾರಿಗೂ ತೊಂದರೆ ಕೊಡುವುದಿಲ್ಲ. ಮಕ್ಕಳು ಸೇರಿದಂತೆ ಕೊಳದಲ್ಲಿ ಸ್ನಾನ ಮಾಡುವಾಗ, ಮೊಸಳೆ ಸರೋವರದಿಂದ ಮೇಲೇರಿಬಂದು ಕೆಲವೊಮ್ಮೆ ದಡದಲ್ಲಿ ಮಲಗಿಕೊಳ್ಳುತ್ತಿತ್ತಂತೆ.
ದೇಗುಲದ ವತಿಯಿಂದ ನೀಡಲಾಗುವ ನೈವೇದ್ಯ ಅನ್ನ ಮತ್ತು ಮೀನುಗಳು ಆಹಾರವಾಗಿತ್ತು. 2016ರ ಅಕ್ಟೋಬರ್‍ನಲ್ಲಿ ಮೊಸಳೆ ಸಾವನ್ನಪ್ಪಿತ್ತು. ಇದರೊಂದಿಗೆ ಗ್ರಾಮಸ್ಥರು ಮೊಸಳೆಗೆ ಸ್ಮಾರಕ ನಿರ್ಮಿಸಿದ್ದಾರೆ ಎಂದು ದೇವಸ್ಥಾನ ಸಮಿತಿ ಸದಸ್ಯ ವಿಶ್ವನಾಥನ್ ತಿಳಿಸಿದ್ದಾರೆ.
ಮೊಸಳೆ ಇದ್ದಾಗ ಒಳ್ಳೆ ಸಮೃದ್ಧಿಯೂ ಇತ್ತು ಎನ್ನುತ್ತಾರೆ ಸ್ಥಳೀಯರು. ಮೂಡಲಮ್ಮ ಮತ್ತು
ದಕ್ಷಿಣಾಮೂರ್ತಿ ದೇವಸ್ಥಾನದ ಭಕ್ತರ ನಡುವಿನ ಸಂಬಂಧವು ನಮ್ಮ ಅನಂತಪುರದ ಬಬಿಯಾಳಂತೆಯೆ.