ನವದೆಹಲಿ: ರೈಲ್ವೆ ಹಳಿಗಳ ಸಮೀಪದ ಊರುಗಳಲ್ಲಿ ದನ ಸಾಕುವವರಿಗೆ ಹಾಗೂ ಹಳಿಗಳ ಬಳಿ ದನ ಮೇಯಲು ಬಿಡುವವರಿಗೆ ರೈಲ್ವೆ ಇಲಾಖೆ ಸೂಚನೆಯೊಂದನ್ನು ನೀಡಿದೆ. ಮಾತ್ರವಲ್ಲ, ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
ಹೀಗೊಂದು ಎಚ್ಚರಿಕೆ ಸಂದೇಶವನ್ನು ಪಶ್ಚಿಮ ರೈಲ್ವೆ ನೀಡಿದ್ದು, ಜಾನುವಾರುಗಳನ್ನು ಸಾಕುವವರು ಹಾಗೂ ಅವುಗಳನ್ನು ಮೇಯಲು ಬಿಡುವವರಿಗೆ ಜಾನವಾರುಗಳನ್ನು ರೈಲ್ವೆ ಹಳಿಗಳ ಬಳಿಗೆ ಬರಲು ಬಿಡದಂತೆ ಸೂಚನೆ ನೀಡಲಾಗಿದೆ. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಜಾನುವಾರುಗಳ ಕಾರಣಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪದೇಪದೆ ಅಪಘಾತಕ್ಕೆ ಈಡಾಗುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಎಚ್ಚರಿಕೆಯನ್ನು ನೀಡಲಾಗಿದೆ. ಏಕೆಂದರೆ ಇಂದು ಕೂಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದನಕರುಗಳಿಂದಾಗಿ ಅಪಘಾತಕ್ಕೀಡಾಗಿದೆ. ಮಾತ್ರವಲ್ಲ ಇದಕ್ಕೂ ಮೊದಲು ಕೆಲವು ದಿನಗಳ ಹಿಂದೆಯೂ ಎರಡು ಸಲ ಇದೇ ಥರದ ಅಪಘಾತ ಸಂಭವಿಸಿ, ರೈಲು ಹಾನಿಗೊಳಗಾಗಿತ್ತು.