ಕೊಲ್ಲಂ: ಹೆಲ್ಮೆಟ್ ಧರಿಸದ ಕಾರು ಚಾಲಕನಿಗೆ ಸಂಚಾರಿ ಪೋಲೀಸರು ದಂಡ ವಿಧಿಸಿದ್ದಾರೆ. ಕೊಲ್ಲಂ ಚತಯಮಂಗಲಂ ಕುರಿ ಮೂಲದ ಸಜೀವ್ ಕುಮಾರ್ ಎಂಬುವವರಿಗೆ ಸಂಚಾರ ಪೋಲೀಸರಿಂದ ನೋಟಿಸ್ ಬಂದಿದೆ.
ಐನೂರು ರೂಪಾಯಿ ದಂಡ ವಿಧಿಸಲಾಗಿದೆ. ಕುತೂಹಲಕಾರಿಯಾಗಿ, ದಂಡ ವಿಧಿಸಲ್ಪಟ್ಟ ಸಜೀವ್ ಅವರಿಗೆ ದ್ವಿಚಕ್ರ ವಾಹನ ಇಲ್ಲದಿರುವುದು ಗಮನಾರ್ಹ.
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಕಳೆದ ಮೇ 2 ರಂದು ನಡೆದಿದೆ ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಕಡಯ್ಕಲ್ ನ ಕಿಲಿಮನೂರು ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಿರಲಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಆದರೆ ತಾಂತ್ರಿಕ ತೊಂದರೆಯ ಕಾರಣ ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ ಎಂಬುದು ಪೋಲೀಸರು ನೀಡಿರುವ ವಿವರಣೆ.
ಈ ಹಿಂದೆಯೂ ವಾಹನಗಳಿಗೆ ದಂಡ ವಿಧಿಸುವ ಬಗ್ಗೆ ಕೇರಳ ಪೋಲೀಸರ ವಿರುದ್ಧ ಆರೋಪ ಕೇಳಿಬಂದಿತ್ತು.ಕಳೆದ ತಿಂಗಳು ಕೇರಳ ಪೋಲೀಸರು ಎಲೆಕ್ಟ್ರಿಕ್ ಸ್ಕೂಟರ್ ಗೆ ಮಾಲಿನ್ಯ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ದಂಡ ವಿಧಿಸಿದ್ದರು. ಮಲಪ್ಪುರಂನ ನೀಲಂಚೇರಿ ಪೋಲೀಸರು ಎಲೆಕ್ಟ್ರಿಕ್ ಸ್ಕೂಟರ್‍ಗೆ ದಂಡ ವಿಧಿಸಿದ್ದಾರೆ. ಹೊಗೆರಹಿತ ಎಲೆಕ್ಟ್ರಿಕ್ ಸ್ಕೂಟರ್ ಮಾಲಿನ್ಯಕ್ಕೆ ದಂಡ ವಿಧಿಸಿದ ಸುದ್ದಿಗೆ ಸಂಬಂಧಿಸಿದಂತೆ ದಂಡ ವಿಧಿಸಿದ ರಶೀದಿ ಮತ್ತು ದಂಡ ವಿಧಿಸಿದ ಸ್ಕೂಟರ್ ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಇದಲ್ಲದೇ ರಾಷ್ಟ್ರೀಯ ಮಾಧ್ಯಮಗಳು ಕೂಡ ಕೇರಳ ಪೋಲೀಸರ ಈ ತಪ್ಪನ್ನು ವರದಿ ಮಾಡಿದ್ದವು.
ಮಾಲಿನ್ಯ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ಅಥರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍ಗೆ ದಂಡ ವಿಧಿಸಲಾಗಿತ್ತು. ಸ್ಕೂಟರ್ ಸವಾರನಿಗೆ ಪೆÇಲೀಸರು 250 ರೂ. ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 213(5)ಇ ಅಡಿಯಲ್ಲಿ ದಂಡ ವಿಧಿಸಿರುವುದು ರಸೀದಿಯಿಂದ ಸ್ಪಷ್ಟವಾಗಿದೆ.
ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ ಪೋಲೀಸರು!
0
ಅಕ್ಟೋಬರ್ 28, 2022