HEALTH TIPS

ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ

 

           ಸೀರೆ ಧರಿಸಿದ ಭಾರತೀಯ ಮಹಿಳೆಯರ ಮೇಲೆ ಅಮೆರಿಕಾದಲ್ಲಿ(America) ದಾಳಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಮಿಲ್ಪಿಟಾಸ್, ಸ್ಯಾನ್ ಜೋಸ್, ಸಾಂಟಾ ಕ್ಲಾರಾ ಮತ್ತು ಸನ್ನಿವೇಲ್ ಸೇರಿದಂತೆ ದಕ್ಷಿಣ ಕೊಲ್ಲಿಯ ಸುತ್ತಮುತ್ತಲಿನ ಸಮುದಾಯಗಳಲ್ಲಿ ದರೋಡೆಗಳು (Robbery) ಹೆಚ್ಚಾಗುತ್ತಿದೆ.
              ಅಧಿಕಾರಿಗಳ ಪ್ರಕಾರ, ಶಂಕಿತ ವ್ಯಕ್ತಿಯು ಸಾಂಪ್ರದಾಯಿಕ ಉಡುಗೆ ಮತ್ತು ಆಭರಣಗಳನ್ನು ಧರಿಸಿರುವ ಭಾರತೀಯ ಮಹಿಳೆಯರನ್ನು (Women) ಗುರಿಯಾಗಿಸಿಕೊಂಡಿದ್ದಾನೆ (Target) ಎಂದು ಹೇಳಲಾಗಿದೆ. ಸಾಂಟಾ ಕ್ಲಾರಾ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ ಜೂನ್‌ನಲ್ಲಿ ಪ್ರಾರಂಭವಾದ ಎರಡು ತಿಂಗಳ ಅಪರಾಧ ಪ್ರಕರಣದಲ್ಲಿ ಹನ್ನೆರಡಕ್ಕೂ ಅಧಿಕ ಭಾರತೀಯ ಮಹಿಳೆಯರನ್ನೆ ಗುರಿಯಾಗಿಸಿಕೊಂಡಿದ್ದು ತಿಳಿದುಬಂದಿದೆ.

                       ಆರೋಪಿ ಮಹಿಳೆಯರ ಕೈ ಎಳೆದು ಆಭರಣ ದೋಚಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಶಂಕಿತನು ತನ್ನ ದರೋಡೆಯ ಸಮಯದಲ್ಲಿ ಮಹಿಳೆಯ ಪತಿಯನ್ನು ಹೊಡೆದಿದ್ದಾನೆ ಎಂದು ಸಿಬಿಎಸ್ ವರದಿ ಮಾಡಿದೆ.

                      ಭಾರತೀಯ ಮಹಿಳೆಯರ ಮೇಲೆ ದಾಳಿ

               ಮಿಲ್ಪಿಟಾಸ್, ಸ್ಯಾನ್ ಜೋಸ್, ಸಾಂಟಾ ಕ್ಲಾರಾ ಮತ್ತು ಸನ್ನಿವೇಲ್ ಸೇರಿದಂತೆ ದಕ್ಷಿಣ ಕೊಲ್ಲಿಯ ಸುತ್ತಮುತ್ತಲಿನ ಸಮುದಾಯಗಳಲ್ಲಿ ದರೋಡೆಗಳು ಹೆಚ್ಚಾಗಿ ವರದಿಯಾಗಿವೆ ಎಂದು ಪ್ರಾಸಿಕ್ಯೂಟರ್‌ಗಳು ದೃಢಪಡಿಸಿದ್ದಾರೆ. ಆರೋಪಿಗಳು ದಾಳಿ ನಡೆಸಿದಾಗ ಬಹುತೇಕ ಎಲ್ಲರೂ ಸೀರೆ, ಬಿಂದಿ ಅಥವಾ ಇತರ ಭಾರತೀಯ ಉಡುಗೆಯಲ್ಲಿದ್ದ ಮಹಿಳೆಯರೇ ಆಗಿದ್ದಾರೆ ಎಂಬುದು ತಿಳಿದುಬಂದಿದೆ.

                        ಕದ್ದ ಆಭರಣಗಳ ಮೌಲ್ಯ ಎಷ್ಟು ಗೊತ್ತೆ?

                ಆಭರಣ ಕಳ್ಳತನ ನಡೆದಿದ್ದು 50-73 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಹೆಚ್ಚಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಶಂಕಿತರು ಕನಿಷ್ಠ 35,000 ಮೌಲ್ಯದ ನೆಕ್ಲೇಸ್ಗಳನ್ನು ಕದ್ದಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ಅಂದಾಜಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಯುಎಸ್ ಮಾರ್ಷಲ್‌ಗಳೊಂದಿಗೆ ಸಾಂಟಾ ಕ್ಲಾರಾದಲ್ಲಿನ ಪೊಲೀಸರು ಶಂಕಿತನನ್ನು 37 ವರ್ಷದ ಈಸ್ಟ್ ಪಾಲೋ ಆಲ್ಟೊದ ಲಥನ್ ಜಾನ್ಸನ್ ಎಂದು ಗುರುತಿಸಿದ್ದಾರೆ.

                              ಡಿಸ್ಟ್ರಿಕ್ಟ್ ಅಟಾರ್ನಿ ಜೆಫ್ ರೋಸೆನ್ ಹೇಳಿಕೆ

           ಡಿಸ್ಟ್ರಿಕ್ಟ್ ಅಟಾರ್ನಿ ಜೆಫ್ ರೋಸೆನ್ ಹೇಳಿಕೆಯಲ್ಲಿ ದಾಳಿಗಳನ್ನು ದೃಢಪಡಿಸಿ "ನಮ್ಮ ದಕ್ಷಿಣ ಏಷ್ಯಾದ ಸಮುದಾಯಕ್ಕೆ ನಾನು ಹೇಳುತ್ತೇನೆ ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ನಮ್ಮ ಕಾನೂನಿನ ಅಡಿಯಲ್ಲಿ ಬಂಧಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ದಾಳಿಗಳನ್ನು ಆರಂಭದಲ್ಲಿ "ದಕ್ಷಿಣ ಏಷ್ಯಾದ ವಿರೋಧಿ" ಎಂದು ದಾಖಲಿಸಲಾಗಿತ್ತು ಮತ್ತು ಹಿಂದೂ ಅಮೇರಿಕನ್ ಫೌಂಡೇಶನ್ ಪ್ರಕಾರ, ಜಿಲ್ಲಾ ವಕೀಲರಿಂದ "ಹಿಂದೂ ವಿರೋಧಿ ದ್ವೇಷದ ಅಪರಾಧಗಳು" ಎಂದು ಮರುವರ್ಗೀಕರಿಸಲಾಯಿತು.

                         ಮಹಿಳೆ ಪತಿಯ ಮೇಲೂ ದಾಳಿ

                    ಈಗ ಜರುಗಿರುವ ಘಟನೆ ಅತ್ಯಂತ ಹೀನಾಯವಾದದ್ದು. ಆಭರಣಗಳನ್ನು ಕದಿಯುವುದರೊಟ್ಟಿಗೆ ಮಹಿಳೆಯ ಪತಿಯನ್ನೂ ಸಹ ಥಳಿಸಲಾಗಿದೆ. ಹೀಗೆ ಮಾಡಿರುವುದು ತಪ್ಪು ಇದು ಆಭರಣವನ್ನು ಕದ್ದಿರುವುದಕ್ಕಿಂತಲೂ ಹೀನಾಯವಾದ ಕೃತ್ಯ ಎಂದು ಹೇಳಲಾಗಿದೆ.

                               ಅಮೆರಿಕಾದಲ್ಲಿ ಭಾರತೀಯರಿಗೆ ಹೆಚ್ಚಿದ ಆತಂಕ

               ಹಿಂದೂ ಅಮೇರಿಕನ್ ಫೌಂಡೇಶನ್ ಈ ಘಟನೆಗಳನ್ನು ಖಂಡಿಸಿದೆ. ಸದಸ್ಯರೊಬ್ಬರು ಮಾತನಾಡಿ ನಾವು ಇಲ್ಲಿ ದ್ವೇಷವನ್ನು ಅನುಭವಿಸುತ್ತಿದ್ದೇವೆ. ಆನ್‌ಲೈನ್ ಹಿಂದೂ-ಫೋಬಿಯಾವನ್ನು ಎದುರಿಸುತ್ತಿದ್ದೇವೆ. ನಾವು ಪೂರ್ಣವಾಗಿ ವಿಚಾರಣೆ ನಡೆಸುವವರೆಗೂ ಬಿಡುವುದಿಲ್ಲ. ಈ ಎಲ್ಲಾ ಕೃತ್ಯಗಳನ್ನು ಗಮನಿಸಿದರೆ ಇದು ಬೇಕೆಂದೇ ಮಾಡಿರುವ ಹಾಗಿದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries