ಬದಿಯಡ್ಕ: ಚಂಬಲ್ತಿಮಾರ್ ನಿವಾಸಿ ನಾರಾಯಣ ಅವರು ಕಿಡ್ನಿ ವೈಫಲ್ಯದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಚಿಕಿತ್ಸೆಗಾಗಿ 45 ಲಕ್ಷ ಹಣದ ವೆಚ್ಚವಾಗಿದ್ದು ಊರವರು ಚಿಕಿತ್ಸಾ ಸಹಾಯ ಸಮಿತಿ ರಚಿಸಿ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಇವರ ಪುತ್ರಿ ಶಾಲಾ ವಿದ್ಯಾರ್ಥಿನಿ. ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು, ಅಧ್ಯಾಪಕ ವೃಂದ, ರಕ್ಷಕರು ಸಂಗ್ರಹಿಸಿದ ಮೊತ್ತವನ್ನು ಮುಖ್ಯ ಶಿಕ್ಷಕ ರಾಜಗೋಪಾಲ ಅವರು ಸಮಿತಿಯ ಪದಾಧಿಕಾರಿ, ವಾರ್ಡ್ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಚಿಕಿತ್ಸಾ ಸಹಾಯ ಸಮಿತಿಯ ಸಂಚಾಲಕ ಸುಧಾಕರ ವಿದ್ಯಾಗಿರಿ, ಖಜಾಂಜಿ ಜಗನ್ನಾಥ ರೈ ಪೆರಡಾಲ, ಸದಸ್ಯ ಪದ್ಮನಾಭ ವಳಮಲೆ, ಕೃಷ್ಣ ಬದಿಯಡ್ಕ, ರಾಮ ಮರಿಯಂಕೂಡ್ಲು ಉಪಸ್ಥಿತರಿದ್ದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ, ಶಾಲಾ ಸಿಬ್ಬಂದಿ ಸಂಘದ ಕಾರ್ಯದರ್ಶಿ ರಿಶಾದ್ ಪಿ.ಎಂ.ಎ. ಮತ್ತು ಶಿಕ್ಷಕ ವರ್ಗ, ಮಕ್ಕಳು ಭಾಗವಹಿಸಿದ್ದರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯಿಂದ ಸಹಾಯ ಹಸ್ತ
0
ಅಕ್ಟೋಬರ್ 15, 2022
Tags