ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಂಚಾಯತಿ ಮಟ್ಟದ ಜಾಗೃತ ಸಂಗಮ ಜರಗಿತು. ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಪಂಚಾಯತಿನ ಪ್ರತಿ ವಾರ್ಡಿನಲ್ಲೂ, ಗಡಿ ಪ್ರದೇಶದಲ್ಲೂ ಅಮಲು ವಸ್ತು ಸಾಗಾಟ ಹಾಗೂ ಮಾರಾಟ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಹಕರಿಸುವಂತೆ ಸಭೆಯಲ್ಲಿ ಆಗ್ರಹಿಸಿದರು.
ಪಂ.ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಠಾಣಾ ಪೋಲಿಸ್ ಅಧಿಕಾರಿ ವಿನೋದ್ ಕುಮಾರ್, ಅಬಕಾರಿ ಇಲಾಖೆಯ ಬದಿಯಡ್ಕ ವಲಯಾಧಿಕಾರಿ ವಿನು ಎಚ್ ಅಮಲು ವಸ್ತು ವಿರುದ್ಧ ಪ್ರಧಾನ ಉಪನ್ಯಾಸಗೈದರು.
ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ ಮೊದಲಾದವರು ಮಾತನಾಡಿದರು. ಪಂಚಾಯತಿ ಸದಸ್ಯರಾದ ಮಹೇಶ್ ಭಟ್, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರಮ್ಲ, ರಾಧಾಕೃಷ್ಣ ನಾಯಕ್ ಶೇಣಿ, ಉμÁ ಕುಮಾರಿ, ಝರೀನಾ ಮುಸ್ತಾಫ, ಆಶಾಲತಾ ಸಭೆಯಲ್ಲಿ ಉಪಸ್ಥಿತರಿದ್ದರು.
ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಸಿಡಿಎಸ್ ಸದಸ್ಯರು, ಆರೋಗ್ಯ ಹಾಗೂ ಶಾಲಾ ಮುಖ್ಯ ಶಿಕ್ಷಕರು, ವಿವಿಧ ಸಾಮಾಜಿಕ ಮುಖಂಡರು ಪಾಲ್ಗೊಂಡರು. ಬಳಿಕ ಅಬಕಾರಿ ಸಿವಿಲ್ ಅಧಿಕಾರಿ ಜನಾರ್ಧನನ್ ತರಗತಿ ನಡೆಸಿದರು. ಪಂ.ಹೆಡ್ ಕ್ಲಾರ್ಕ್ ಪಿ.ಎಸ್.ಪ್ರೇಂ ಚಂದ್ ಸ್ವಾಗತಿಸಿ, ಜ್ಯೂ.ಹೆಲ್ತ್ ಇನ್ಸ್ ಪೆಕ್ಟರ್ ಸಜಿತ್ ವಂದಿಸಿದರು.