ನವದೆಹಲಿ:ಭಾರತದ ಸಗಟು ಹಣದುಬ್ಬರ ದರ ಆಗಸ್ಟ್(August) ತಿಂಗಳಿನಲ್ಲಿ ಶೇ 12.41 ಇದ್ದರೆ ಸೆಪ್ಟೆಂಬರ್(September) ನಲ್ಲಿ ಶೇ 10.7 ಕ್ಕೆ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶ ಸೂಚಿಸುತ್ತದೆ.
ಕಳೆದ ವರ್ಷದ ಎಪ್ರಿಲ್ ತಿಂಗಳಿನಿಂದ ಸಗಟು ಮಾರುಕಟ್ಟೆಯಲ್ಲಿನ ಹಣದುಬ್ಬರ ಎರಡಂಕಿ ತಲುಪಿತ್ತು.
ಆದರೆ ಆಗಸ್ಟ್ ತಿಂಗಳಿನಲ್ಲಿ ಶೇ 7 ಇದ್ದ ರಿಟೇಲ್ ಹಣದುಬ್ಬರ ದರ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 7.41 ಗೆ ಏರಿಕೆಯಾಗಿದೆ. ಇ ದು ಕಳೆದ ಐದು ತಿಂಗಳ ಅವಧಿಯ ಗರಿಷ್ಠ ಪ್ರಮಾಣವಾಗಿದೆ. ಆರ್‌ಬಿಐ ನಿಗದಿಪಡಿಸಿದ ಮೇಲಿನ ಮಿತಿಗಿಂತ ರಿಟೇಲ್ ಹಣದುಬ್ಬರ ಕಳೆದ ಒಂಬತ್ತು ತಿಂಗಳುಗಳಿಂದ ಹೆಚ್ಚಾಗಿದೆ.
"ಸೆಪ್ಟೆಂಬರ್ ತಿಂಗಳಿನಲ್ಲಿ ಹಣದುಬ್ಬರ ಪ್ರಮುಖವಾಗಿ ಖನಿಜ ತೈಲಗಳ ಬೆಲೆ ಏರಿಕೆಯಿಂದ, ಆಹಾರ, ಕಚ್ಛಾ ತೈಲ, ನೈಸರ್ಗಿಕ ಅನಿಲ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಲೋಹಗಳು, ಜವುಳಿ, ವಿದ್ಯುತ್ ಬೆಲೆ ಏರಿಕೆಯಿಂದ ಉಂಟಾಗಿದೆ,'' ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಹೇಳಿಕೆ ತಿಳಿಸಿದೆ.
ಆಗಸ್ಟ್ ತಿಂಗಳಿನಲ್ಲಿ ಆಹಾರ ಹಣದುಬ್ಬರ ಶೇ 9.93 ಇದ್ದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಅದು ಶೇ 8,08 ಗೆ ಇಳಿಕೆಯಾಗಿದೆ. ಇಂಧನ ಮತ್ತು ವಿದ್ಯುತ್ ಕ್ಷೇತ್ರದ ಹಣದುಬ್ಬರ ಪ್ರಮಾಣ ಕೂಡ ಈ ಅವಧಿಯಲ್ಲಿ ಶೇ 33,67 ರಿಂದ ಶೇ 32.61 ಗೆ ಇಳಿಕೆಯಾಗಿದೆ.
ಉತ್ಪಾದಕ ವಸ್ತುಗಳ ಹಣದುಬ್ಬರ ಆಗಸ್ಟ್ ತಿಂಗಳಿನಲ್ಲಿ ಶೇ 7.51 ಇದ್ದರೆ ಸೆಪ್ಟೆಂಬರ್ ನಲ್ಲಿ ಶೇ 6.34 ಗೆ ಇಳಿಕೆಯಾಗಿದೆ.